November 8, 2025
WhatsApp Image 2024-04-29 at 8.44.01 AM

ಬೆಂಗಳೂರು: ಗೃಹಲಕ್ಷ್ಮಿ ಹಣದಿಂದ ಹಲವು ಮಂದಿ ಮಹಿಳೆಯರ ಬದುಕು ಹಸನಾಗುತ್ತಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಹಲಕ್ಷ್ಮಿ ಹಣದಿಂದ ಹೊಸಮೊಬೈಲ್‌ ಖರೀದಿಸಿದ ಮಹಿಳೆಯ ಸಂತಸವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆಯ ನಿವಾಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು ಪ್ರತಿ ತಿಂಗಳ ಹಣವನ್ನು ಕೂಡಿಟ್ಟು ತಮ್ಮ ಇಷ್ಟದ ಮೊಬೈಲ್ ಖರೀದಿಸಿ, ನನ್ನ ಫೋಟೋವನ್ನು ವಾಲ್ ಪೇಪರ್‌ನಲ್ಲಿರಿ ಸಂಭ್ರಮಿಸಿದ್ದಾರೆ.

ಮೊನ್ನೆ ಹಾವೇರಿಯಲ್ಲಿ ನಡೆದ ಸಮಾವೇಶಕ್ಕೆ ಹೊಸ ಮೊಬೈಲ್‌ನೊಂದಿಗೆ ಬಂದಾಗ ಅವರ ಖುಷಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗೃಹಲಕ್ಷ್ಮಿ ಯೋಜನೆ ಬಡವರ ಮನೆಯ ಹಸಿವು ನೀಗಿಸುತ್ತಿರುವುದು ಮಾತ್ರವಲ್ಲ, ನಾಡಿನ ಲಕ್ಷಾಂತರ ತಾಯಂದಿರು, ಅಕ್ಕತಂಗಿಯರ ಕನಸುಗಳನ್ನು ನನಸಾಗಿಸಿದೆ. ಕೆಲವರು ಟಿ.ವಿ ಖರೀದಿಸಿದರೆ, ಮತ್ತೆ ಕೆಲವರು ಮೊಬೈಲ್, ಫ್ರಿಡ್ಜ್, ಬಟ್ಟೆಬರೆ ಹೀಗೆ ತಿಂಗಳ ಹಣ ಕೂಡಿಟ್ಟು ಇಷ್ಟದ ವಸ್ತು ಖರೀದಿಸುತ್ತಿದ್ದಾರೆ.

ಬಡಜನರ ಬದುಕಿಗೆ ನೆರವಾಗಬೇಕು, ನೊಂದವರ ಬಾಳಲ್ಲಿ ನೆಮ್ಮದಿ ಮೂಡಿಸಬೇಕು ಎಂಬ ತನ್ನ ಉದ್ದೇಶವನ್ನು ಗೃಹಲಕ್ಷ್ಮಿ ಯೋಜನೆ ಈಡೇರಿಸುತ್ತಿದೆ. ಯೋಜನೆ ಜಾರಿಗೆಕೊಟ್ಟ ನನ್ನಲ್ಲಿ ಸಾರ್ಥಕಭಾವ ಮೂಡಿದೆ ಅಂತ ಹೇಳಿದ್ದಾರೆ.

About The Author

Leave a Reply