ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ವಿಷಯ : ತಾಯಿ ಮಗಳ ಜಗಳ ಕೊಲೆಯಲ್ಲಿ ಅಂತ್ಯ..!!

 ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಮತ್ತು ಮಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಬನಶಂಕರಿ ಶಾಸ್ತ್ರಿನಗರದ 3ನೇ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ.
ದ್ವಿತೀಯ ಪಿಯುಸಿಯಲ್ಲಿ ಸಾಹಿತಿ ಪಾಸ್ ಆಗಿದ್ದಾಳೆ. ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮಗಳನ್ನು ತಾಯಿ ಪ್ರಶ್ನೆ ಮಾಡಿದ್ದಾಳೆ. Ee ವಿಷಯದಲ್ಲಿ ಪುತ್ರಿ ಹಾಗೂ ತಾಯಿ ಪದ್ಮಜಾ ನಡುವೆ ವಾಗ್ವಾದ ನಡೆದಿದೆ. ಬಳಿಕನೂ ಇದೇ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಸೋಮವಾರ ಇದೇ ವಿಚಾರಕ್ಕೆ ನಡೆದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ತಾಯಿ ಪದ್ಮಜಾಗೆ 4-5 ಕಡೆ ಸಾಹಿತಿ ಚಾಕುವಿನಿಂದ ಇರಿದರೆ, ತಾಯಿ ಕೂಡ ಮಗಳು ಸಾಹಿತಿ ಮೇಲೆ ಪ್ರತಿದಾಳಿ ಮಾಡಿ ಕೊಲೆಯೇ ಮಾಡಿದ್ದಾಳೆ. ಸದ್ಯ ಪದ್ಮಜಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply