August 29, 2025
WhatsApp Image 2024-07-01 at 10.55.28 AM

ಬಂಟ್ವಾಳ: ಮೊಗರ್ನಾಡಿನಲ್ಲಿ ಫೆ.14ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನರಿಕೊಂಬು ಗ್ರಾಮದ ಅಂತರಾಳ ನಿವಾಸಿ ಧರ್ಣಪ್ಪ ಕುಲಾಲ್(74) ಜೂ.30ರಂದು ಮೃತಪಟ್ಟಿದ್ದು, ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಸ್ತೆ ದಾಟಲು ಕಾಯುತ್ತಿದ್ದ ಧರ್ಣಪ್ಪ ಅವರಿಗೆ ಬೈಕ್ ಡಿಕ್ಕಿ ಹೊಡೆದಿದೆ. ದೀರ್ಘ ಕಾಲ ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಸುಧಾರಣೆ ಕಾಣದ ಕಾರಣ ತಿಂಗಳ ಹಿಂದೆ ಮನೆಗೆ ಕರೆತರಲಾಗಿತ್ತು. ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಣಪ್ಪ ಅವರು ಶ್ರೀ ಕೋದಂಡರಾಮ ಬಜನಾ ಮಂದಿರದ ಸಂಸ್ಥಾಪಕರು ಮತ್ತು ಹೆಸರಾಂತ ಭಜನಾ ಗಾಯಕರಾಗಿದ್ದರು. ಅಂತರ ಶ್ರೀ ನಲ್ಕತ್ತಾಯ ಪಂಜುರ್ಲಿ ದೈವಸ್ಥಾನದಲ್ಲಿ ಪ್ರತಿನಿತ್ಯ ಸೇವೆ ಸಲ್ಲಿಸುತ್ತಿದ್ದ ಅವರು ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.

About The Author

Leave a Reply