ಬಜಪೆ: ವಿಮಾನ ನಿಲ್ದಾಣದ ನೀರು ನುಗ್ಗಿ ಹಲವಾರು ಮನೆಗಳಿಗೆ ಹಾನಿ- ಗ್ರಾಮಸ್ಥರಿಂದ ಪ್ರತಿಭಟನೆ

ಮಂಗಳೂರಿನ ಬಜಪೆ ವಿಮಾನ ನಿಲ್ದಾಣದ ನೀರು ಹತ್ತಿರದ ಸುಮಾರು ಮನೆಗೆ ನುಗ್ಗಿ ಜನ ಜೀವನ ಅಸ್ತವ್ಯಸ್ತತವಾಗಿದೆ. ಸ್ಥಳೀಯರು ಈ ವಿಷಯದಿಂದ ರೊಚ್ಚಿಗೆದ್ದು ಪ್ರತಿಭಟನೆ ಮಾಡುತ್ತಿದ್ದಾರೆ. ಮಳೆ ನೀರು ಮನೆಗಳಿಗೆ ಹರಿಯಲು ವಿಮಾನ ನಿಲ್ದಾಣದ ಸಂಸ್ಥೆಯೇ ಮುಖ್ಯ ಕಾರಣ ಎಂದು ನಾಗರಿಕರು ಆಕ್ರೋಶಗೊಂಡಿದ್ದಾರೆ.

ಮಾಹಿತಿಯ ಪ್ರಕಾರ ಸುಮಾರು7 ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟುಮಾಡಿದೆ.
ಶೀಘ್ರವೇ ಮಳೆ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿ ನೀರು ನುಗ್ಗಿದ ಮನೆಗಳಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ವಿಮಾನ ನಿಲ್ದಾಣ ಸಂಸ್ಥೆ ಗೆ ಆಗ್ರಹಿಸಿದರು.

Leave a Reply