August 30, 2025
WhatsApp Image 2024-07-01 at 3.52.14 PM

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆ ಎಂಬಲ್ಲಿರುವ ದಾದಿಯರ ಕೇಂದ್ರ ಶೋಚನೀಯ ಸ್ಥಿತಿಯಲ್ಲಿದೆ.
ಕಳೆದ ಎಂಟು ವರುಷಗಳಿಂದ ಇಲ್ಲಿನ ದಾದಿಯರ ಉಪ ಕೇಂದ್ರದ ಪರಿಸ್ಥಿತಿಯ ಬಗ್ಗೆ ಇದೀಗ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಆಲಡ್ಕ, ಬಂಗ್ಲೆ ಗುಡ್ಡೆ, ನಂದಾವರ ಕೆಲವು ಊರುಗಳು ಸೇರಿ ಒಂದು ಸಾವಿರಕ್ಕಿಂತ ಹೆಚ್ಚು ಮನೆಗಳಿವೆ. ಕಳೆದ ಎಂಟು ವರುಷಗಳ ಮೊದಲು ಇಲ್ಲಿ ಜನಗಳಿಗೆ ಪ್ರಯೋಜನಕಾರಿಯಾಗಿದ್ದ ಕೇಂದ್ರ ಇದೀಗ ಹುಲ್ಲು ಗಿಡಗಳು ಪೊದೆಗಳು ಸುತ್ತಲೂ ಅವರಿಸಿ, ಬೂತಬಂಗಲೆಯಾಗಿ ಮಾರ್ಪಾಡು ಹೊಂದಿದೆ. ಕಾರಣವಿಲ್ಲದೆ ಕೇಂದ್ರವನ್ನು ಬಂದ್ ಮಾಡಿದ ಇಲಾಖೆಯ ಕೆಲಸಕ್ಕೆ ಕೇಂದ್ರ ಬೀಳುವ ಹಂತಕ್ಕೆ ಮುಟ್ಟಿದೆ.
ಎಂಟು ವರ್ಷಗಳಿಂದ ಪಾಳು ಬಿದ್ದಿರುವ ಕೇಂದ್ರದ ಹತ್ತಿರ ಹೋಗಲು ಭಯ ಉಂಟುಮಾಡುವ ಕೇಂದ್ರವನ್ನು ಗಮನಿಸಿದ ಸಾರ್ವನಿಕರು ಇದರ ಬಗ್ಗೆ ಇಲಾಖೆಗೆ ದೂರು ನೀಡಿದ್ದಾರೆ. ಯು ಟಿ ಖದರ್ ಆರೋಗ್ಯ ಸಚಿವರಾಗಿದ್ದ ವೇಳೆ ಅವರ ಬಳಿ ಹೋಗಿ ಮಾಹಿತಿ ನೀಡಿದ್ದಾರೆ ಆದರೆ ಯಾವುದೇ ಪ್ರಯೋಜನ ಆಗಲಿಲ್ಲ ಅಂತ ಗ್ರಾಮಸ್ಥರು ತಿಳಿಸಿದ್ದಾರೆ.

ಶಾಸಕರ ಗಮನಕ್ಕೆ ತಂದು ವ್ಯವಸ್ಥೆ ಮಾಡುತ್ತೇವೆ : ಖಾಲಿದ್ ನಂದಾವರ ಗ್ರಾಮಸ್ಥ .
ಕಳೆದ ಎಂಟು ವರ್ಷಗಳಿಂದ ದುಸ್ಥಿತಿಯಲ್ಲಿ ಕೇಂದ್ರವನ್ನು ಸ್ಥಳೀಯ ಶಾಸಕರ ಗಮನಕ್ಕೆ ತರುತ್ತೇವೆ . ಈವರೆಗೆ ಅವರಿಗೆ ಗ್ರಾಮಸ್ಥರು ಯಾರೂ ಕೂಡ ತಿಳಿಸಿಲ್ಲ ಎಂದು ಗೊತ್ತಾಗಿದೆ.
ಸರಕಾರದ ಸೊತ್ತು ಈ ರೀತಿಯಲ್ಲಿ ದುರ್ಬಳಕೆ ಆಗಬಾರದು ಮತ್ತು ಜನರಿಗೆ ಸದ್ಬಳಕೆಯಾಗುವ ನಿಟ್ಟಿನಲ್ಲಿ ಶಾಸಕರ ಬಳಿ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

About The Author

Leave a Reply