August 30, 2025
WhatsApp Image 2024-06-06 at 10.56.26 AM

ಬೆಂಗಳೂರು : ನರೇಂದ್ರ ಮೋದಿ ಆರ್.‌ಎಸ್.‌ಎಸ್‌ ನವರಿಗೆ, ಬಿಜೆಪಿಯವರಿಗೆ ಗುರಿಯಾಗಿಸಿ ಹೇಳಿದರೆ ಅದು ಇಡೀ ಹಿಂದೂ ಧರ್ಮಕ್ಕೆ ಹೇಳಿದಂತಾಗುತ್ತದೆಯೇ? ಎಂದು ರಾಹುಲ್‌ ಗಾಂಧಿಯವರ ಹಿಂದುಗಳಿಂದ ಹಿಂಸೆ ಎಂಬ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಸರ್ಮಥನೆ ನೀಡಿದ್ದಾರೆ.

 

ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ, ಭಯಪಡಬೇಡಿ, ಭಯಗೊಳಿಸಬೇಡಿ’ ಎಂದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಸಾರಿ ಹೇಳಿವೆ. ಆದರೆ ಬಿಜೆಪಿಯಲ್ಲಿ ಹಿಂದುಗಳೆಂದು ಹೇಳಿಕೊಳ್ಳುವವರ ಕೆಲಸವೇ ಹಿಂಸೆ, ಭಯ ಮತ್ತು ಸುಳ್ಳು ಹರಡುವುದು….” – ಹೀಗೆಂದು ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಹೇಳಿದರೆ ಬಿಜೆಪಿ ನಾಯಕರೇಕೆ ಉರಿದು ಬೀಳಬೇಕು? ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಅವರಿಗೆ, ಆರ್.‌ಎಸ್.‌ಎಸ್‌ ನವರಿಗೆ, ಬಿಜೆಪಿಯವರಿಗೆ ಗುರಿಯಾಗಿಸಿ ಹೇಳಿದರೆ ಅದು ಇಡೀ ಹಿಂದೂ ಧರ್ಮಕ್ಕೆ ಹೇಳಿದಂತಾಗುತ್ತದೆಯೇ? ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಮ್ಮ ನಾಯಕರಾದ Rahul Gandhi ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಬಿಜೆಪಿ, ತನಗೆ ಹೇಳಿದ ಮಾತನ್ನು ಹಿಂದೂ ಧರ್ಮಕ್ಕೆ ಹೇಳಿದ್ದಾರೆ ಎಂದು ತಿರುಚಿ ತನ್ನ ವೈಫಲ್ಯ ಮರೆಮಾಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

About The Author

Leave a Reply