October 12, 2025
WhatsApp Image 2024-07-02 at 11.28.56 AM

ಮಂಜೇಶ್ವರ: ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ಮೃತಪಟ್ಟು  ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಮುರತ್ತನೆ ಜಂಕ್ಷನ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ಮಿಂಜ ಪಂಚಾಯತ್ ಗೊಳಪಟ್ಟ ತಲೆಕಳ ಬಳಿಯ ಕುದ್ರೆಪಾಡಿ ನಿವಾಸಿ ಅಬ್ದುಲ್ ಮುಸ್ಲಿಯಾರ್ (60) ಎಂದು ಗುರುತಿಸಲಾಗಿದೆ. ಊರಿನಲ್ಲಿ ಕೃಷಿಕಾರಾಗಿದ್ದ ಅಬ್ದುಲ್ ಮುಸ್ಲಿಯಾರ್ ಪತ್ನಿ ಆಮಿನಾ, ಪುತ್ರಿ ಸೆಬಿರಾ, ಸೊಸೆ ಸುಮಯ್ಯ ಜೊತೆ ತಮ್ಮ ಆಲ್ಟೊ ಕಾರಿನಲ್ಲಿ ಮಂಜೇಶ್ವರ ಪಾವೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿ, ಹಿಂತಿರುಗುತ್ತಿದ್ದರು. ಪುತ್ರಿ ಸಾಬೀರ ಕಾರು ಚಲಾಯಿಸುತಿದ್ದರು ಎಂದು ತಿಳಿದು ಬಂದಿದೆ.

ಇವರ ಕಾರು ಮುರತ್ತನೆ ಜಂಕ್ಷನ್ ತಲುಪುತಿದ್ದಂತೆ ಎದುರಿನಿಂದ ಬರುತ್ತಿದ್ದ ಆನೆಕಲ್ಲಿನಿಂದ ಹೊಸಂಗಡಿ ಭಾಗಕ್ಕೆ ತೆರಳುವ ಇನೋವಾ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಅಲ್ಪ ದೂರದ ವರೆಗೆ ಇವರು ಸಂಚರಿಸುವ ಆಲ್ಟೊ ಕಾರನ್ನು ಎಳೆದೊಯ್ಯಲಾಗಿದೆ. ವಿಷಯ ತಿಳಿದು ಆಗಮಿಸಿದ ಸ್ಥಳೀಯರು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಆಸ್ಪತ್ರೆಗೆ ಸಾಗಿಸುವ ಹಾದಿ ಮದ್ಯೆ ಅಬೂಬಕ್ಕರ್ ಮುಸ್ಲಿಯಾರ್ ಕೊನೆಯುಸಿರೆಳೆದಿದ್ದಾರೆ. ಇದೀಗ ಅಬೂಬಕರ್ ಮುಸ್ಲಿಯಾರ್ ರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಸಂಜೆ ವೇಳೆ ಮನೆಗೆ ತರಲಾಗುವುದು. ಅಪಘಾತದಲ್ಲಿ ಗಾಯಗೊಂಡವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ಅಬೂಬಕರ್ ಮುಸ್ಲಿಯಾರ್ ಕೃಷಿಕರಾಗಿದ್ದು, ಪತ್ನಿ, ಮಕ್ಕಳಾದ ಸೌದಾ, ಹಾರಿಸ್, ಆಶೀರ್, ಅನ್ಸಾರ್, ಸಾಬಿರಾ, ಅಳಿಯ ಸತ್ತಾರ್, ಹಾಗೂ ಸಹೋದರ – ಸಹೋದರಿಯರನ್ನು ಅಗಲಿದ್ದಾರೆ.

About The Author

Leave a Reply