August 30, 2025
WhatsApp Image 2024-07-03 at 9.08.23 AM

ಉಳ್ಳಾಲ ತಾಲೂಕು ಸೋಮೇಶ್ವರ ಭಟ್ಟಪಾಡಿ ಪ್ರದೇಶದಲ್ಲಿ ಇತ್ತೀಚೆಗೆ ಜಮೀಲಾ ಮತ್ತು ರಾಜೀವಿ ಎಂಬವರ ಮನೆ ಕುಸಿದು ಬಿದ್ದಿದ್ದು ಕಡಲು ಕೊರೆತ ಪ್ರಬಲವಾಗಿ ಇದ್ದು ಮುಂದಿನ ದಿನಗಳಲ್ಲಿ ಸ್ಥಳೀಯರು ಇನ್ನಷ್ಟು ಕಷ್ಟ ಸಂಕಷ್ಟಗಳು ಉಂಟಾಗುವ ಸಾಧ್ಯತೆಯಿದೆ. ದಿನಾಂಕ 02-07-2024 ಮಧ್ಯಾಹ್ನ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ನೇತೃತ್ವದ ನಿಯೋಗ ಸದ್ರಿ ಪ್ರದೇಶಕ್ಕೆ ಸ್ಥಳೀಯರ ಹಾಗೂ “ ಟೀಮ್ ಸೇವ್ ಬಟ್ಟಪಾಡಿ”ವಿನಂತಿ ಮೇರೆಗೆ ಭೇಟಿ ನೀಡಿದರು. ಜನರ ಭಾವನಾತ್ಮಕ ಮಾತುಗಳ ಕೇಳಿದ ಯೋಗಿಶ್ ಶೆಟ್ಟಿ ಜಪ್ಪು ರವರು ಕೂಡಲೇ ಕಡಲು ಕೊರೆತ ಪ್ರದೇಶಗಳಲ್ಲಿ ಬರ್ಮನ್ನು ಅಳವಡಿಸಿ ಸ್ಥಳೀಯ ಮೀನುಗಾರರ ಮತ್ತು ಸ್ಥಳೀಯ ನಿವಾಸಿಗಳ ಪ್ರಾಣ ಹಾಗೂ ಸ್ವತ್ತು ರಕ್ಷಣೆಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ ಧೋರಣೆಯನ್ನು ತರಟೆಗೆ ತೆಗೆದುಕೊಂಡು ಕೂಡಲೇ ಕ್ರಮ ಕೈಗೊಳ್ಳದಿದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳವುದಾಗಿ ಎಚ್ಚರಿಸಿದರು. ಸದ್ರಿ ಪ್ರದೇಶಕ್ಕೆ ಭೇಟಿ ನೀಡಿದ ಸಿ.ಆರ್.ಝೆಡ್ ಕಮಿಷನರ್ ಆರ್. ಗೋಕುಲ್ ಮತ್ತು ಉಪ ನಿರ್ದೇಶಕಿ ಸುಶ್ಮಿತಾ ರವರು ಆಗಮಿಸಿದ್ದು ಅವರಿಗೆ ಸ್ಥಳೀಯರ ಕಷ್ಟ ಸಂಕಷ್ಟಗಳನ್ನು ಮನವರಿಕೆ ಮಾಡಿದರು. ಇಲ್ಲಿನ ಕಡಲ ಕೊರೆತದ ಅಬ್ಬರ ನೋಡಿ ಅಧಿಕಾರಿಗಳು ಬೆರಗಾಗಿ ನಮ್ಮಿಂದ ಸಾಧ್ಯವಾದ ಕ್ರಮಗಳನ್ನು ಶೀಘ್ರದಲ್ಲಿ ಕೈಗೊಳ್ಳಲು ಪ್ರಯತ್ನಿಸುವುದ್ದಾಗಿ ಸ್ಥಳೀಯರಿಗೆ ಮತ್ತು ತುಳುನಾಡ ರಕ್ಷಣಾ ವೇದಿಕೆ ಮುಖಂಡರಿಗೆ ಭರವಸೆ ನೀಡಿದರು. ಉಳ್ಳಾಲ ತಾಲೂಕು ಗೌರವ ಅಧ್ಯಕ್ಷ ಡಾ. ಶೇಕ್ ಭಾವ , ಉಳ್ಳಾಲ ತಾಲೂಕು ಅಧ್ಯಕ್ಷ ಅಬುಬಕ್ಕರ್ ಕೈರಂಗಳ, ಪ್ರಧಾನ ಕಾರ್ಯದರ್ಶಿ ಸುಕೇಶ್ ಜಿಕೆ.ಉಚ್ಚಿಲ್ , ಸಬೀರ್ ತಲಪಾಡಿ, ಚಂದ್ರಶೇಖರ್ ಉಚ್ಚಿಲ್, ವಿಶ್ವ ಕೋಟೆಬಳಿ.ರಾಮಪ್ಪ ಬಟ್ಟಪಾಡಿ,ದಯಾವತಿ ಬಟ್ಟಪಾಡಿ, ಹಮೀದ್ ಬಟ್ಟಪಾಡಿ ಮತ್ತಿತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಜನರ ಭಾವನಾತ್ಮಕ ಮಾತುಗಳ ಕೇಳಿದ ಯೋಗಿಶ್ ಶೆಟ್ಟಿ ಜಪ್ಪು ರವರು ಕೂಡಲೇ ಕಡಲು ಕೊರೆತ ಪ್ರದೇಶಗಳಲ್ಲಿ ಬರ್ಮನ್ನು ಅಳವಡಿಸಿ ಸ್ಥಳೀಯ ಮೀನುಗಾರರ ಮತ್ತು ಸ್ಥಳೀಯ ನಿವಾಸಿಗಳ ಪ್ರಾಣ ಹಾಗೂ ಸ್ವತ್ತು ರಕ್ಷಣೆಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ ಧೋರಣೆಯನ್ನು ತರಟೆಗೆ ತೆಗೆದುಕೊಂಡು ಕೂಡಲೇ ಕ್ರಮ ಕೈಗೊಳ್ಳದಿದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳವುದಾಗಿ ಎಚ್ಚರಿಸಿದರು.

ಸದ್ರಿ ಪ್ರದೇಶಕ್ಕೆ ಭೇಟಿ ನೀಡಿದ ಸಿ.ಆರ್.ಝೆಡ್ ಕಮಿಷನರ್ ಆರ್. ಗೋಕುಲ್ ಮತ್ತು ಉಪ ನಿರ್ದೇಶಕಿ ಸುಶ್ಮಿತಾ ರವರು ಆಗಮಿಸಿದ್ದು ಅವರಿಗೆ ಸ್ಥಳೀಯರ ಕಷ್ಟ ಸಂಕಷ್ಟಗಳನ್ನು ಮನವರಿಕೆ ಮಾಡಿದರು. ಇಲ್ಲಿನ ಕಡಲ ಕೊರೆತದ ಅಬ್ಬರ ನೋಡಿ ಅಧಿಕಾರಿಗಳು ಬೆರಗಾಗಿ ನಮ್ಮಿಂದ ಸಾಧ್ಯವಾದ ಕ್ರಮಗಳನ್ನು ಶೀಘ್ರದಲ್ಲಿ ಕೈಗೊಳ್ಳಲು ಪ್ರಯತ್ನಿಸುವುದ್ದಾಗಿ ಸ್ಥಳೀಯರಿಗೆ ಮತ್ತು ತುಳುನಾಡ ರಕ್ಷಣಾ ವೇದಿಕೆ ಮುಖಂಡರಿಗೆ ಭರವಸೆ ನೀಡಿದರು. ಉಳ್ಳಾಲ ತಾಲೂಕು ಗೌರವ ಅಧ್ಯಕ್ಷ ಡಾ. ಶೇಕ್ ಭಾವ , ಉಳ್ಳಾಲ ತಾಲೂಕು ಅಧ್ಯಕ್ಷ ಅಬುಬಕ್ಕರ್ ಕೈರಂಗಳ, ಪ್ರಧಾನ ಕಾರ್ಯದರ್ಶಿ ಸುಕೇಶ್ ಉಚ್ಚಿಲ್ ಜಿಕೆ, ಸಬೀರ್ ತಲಪಾಡಿ, ಚಂದ್ರಶೇಖರ್, ಮತ್ತಿತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

About The Author

Leave a Reply