ಕಾಸರಗೋಡು: ಪುರುಷ ಮತ್ತು ಮಹಿಳೆಯ ಮೃತದೇಹ ವಸತಿಗೃಹದಲ್ಲಿ ಪತ್ತೆಯಾದ ಘಟನೆ ನಡೆದಿದೆ . ಮಹಿಳೆಯನ್ನು ಕೊಲೆಗೈದು ಈತ ಆತ್ಮಹತ್ಯೆ ಗೈದಿರಬಹುದು ಎಂದು ಶಂಕಿಸಲಾಗಿದೆ.ನೆಲ್ಲಿಕಟ್ಟೆ ಯ ಫಾತಿಮಾ (42) ಹಾಗೂ ಚೆಂಗಳ ರಹಮತ್ ನಗರದ ಕೆ . ಹುಸೈನಾರ್ ( 33) ಮೃತಪಟ್ಟವರು.ಕಾಸರಗೋಡು ನಗರದ ವಸತಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ . ಕಾಸರಗೋಡು ಹಾಗೂ ಹೊಸದುರ್ಗ ಠಾಣಾ ಪೊಲೀಸರು ಮಹಜರು ನಡೆಸಿದ್ದು , ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಗರದಲ್ಲಿರಿಸಲಾಗಿದೆ.
ಫಾತಿಮಾಳು ಪತಿ ಮತ್ತು ಮಕ್ಕಳನ್ನು ತೊರೆದು ಕಳೆದ ನಾಲ್ಕು ವರ್ಷಗಳಿಂದ ಹುಸೈನಾರ್ ಜತೆ ವಾಸವಾಗಿದ್ದಳು ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ . ಪೊಲೀಸರು ತನಿಖೆ ನಡೆಸುತ್ತಿದ್ದಾರೆ