
ಕಾಸರಗೋಡು: ಹಾವು ಕಡಿದು ಮಹಿಳೆರೋರ್ವರು ಮೃತಪಟ್ಟ ಘಟನೆ ಪೈವಳಿಕೆ ಸಮೀಪದ ಕುರುಡಪದವು ಎಂಬಲ್ಲಿ ನಡೆದಿದೆ.



ಪೈವಳಿಕೆ ಕುರುಡಪದವಿನ ದಿವಂಗತ ಮಾಂಕುರವರ ಪುತ್ರಿ ಚೋಮು (64) ಮೃತಪಟ್ಟವರು. ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಮಲಗಿದ್ದ ಚೋಮ ಅವರಿಗೆ ಕೈಗೆ ಯಾವುದೋ ಜೀವಿ ಕಡಿದ ಬಗ್ಗೆ ಅನುಭವವಾಗಿದ್ದು, ಎಚ್ಚರಗೊಂಡು ಸಹೋದರನಿಗೆ ತಿಳಿಸಿದ್ದಾರೆ. ತಕ್ಷಣ ಮನೆಯೊಳಗೆ ಶೋಧ ನಡೆಸಿದಾಗ ನಾಗರ ಹಾವು ಪತ್ತೆಯಾಗಿದೆ. ಕೂಡಲೇ ನೆರೆಮನೆಯರ ಸಹಾಯದಿಂದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.