October 23, 2025
WhatsApp Image 2024-07-07 at 3.07.23 PM (1)

ಉಳ್ಳಾಲ ತಾಲೂಕು ಘಟಕದ ನೂತನ ಸಾರಥಿಗಳ ಪದಗ್ರಹಣ ಸಮಾರಂಭ ದಿನಾಂಕ 7-7-2024 ರವಿವಾರದಂದು ತೊಕ್ಕೊಟ್ಟು – ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆ ಯಲ್ಲಿರುವ ಸೇವಾ ಸೌಧ ದಲ್ಲಿರುವ ಉಳ್ಳಾಲ ತಾಲೂಕು ಘಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆಯಿತು. ವೈಷ್ಣವಿ ಪ್ರಾರ್ಥನೆ ಮಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿದ್ದು ನೂತನ ಅಧ್ಯಕ್ಷ ಡಿಐ ಅಬೂಬಕರ್ ಕೈರಂಗಳ ಸ್ವಾಗತ ಭಾಷಣ ಮಾಡಿದರು.

ಕೇಂದ್ರಿಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಪ್ರಸ್ತಾವನೆ ಭಾಷಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ದೀಪ ಬೆಳಗಿಸಿ ಉದ್ಘಾಟನೆಯನ್ನು ನಡೆಸಿ ತೌಳವ ಸಂಸ್ಕೃತಿ ಆಚಾರ ವಿಚಾರ ಬಗ್ಗೆ ಮಾತನಾಡಿ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಮತ್ತು ಸಾಮಾಜಿಕ ಕಳಕಳಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಜನಾಬ್ ಹೈದರ್ ಪರ್ತಿಪ್ಪಾಡಿ, ಅಲ್ ಅನ್ಸಾರ್ ವಾರಪತ್ರಿಕೆ ಸಂಪಾದಕರಾದ ಜನಾಬ್. ಕೆ. ಎಂ. ಸಿದ್ದೀಖ್ ಮೋಂಟುಗೋಳಿ, ಜೆ.ಸಿ.ಐ ಮಂಗಳಗಂಗೋತ್ರಿ ಕೊಣಾಜೆಯ ಪೂರ್ವ ಅಧ್ಯಕ್ಷರಾದ ಶ್ರೀ ಜೆ. ಸಿ ಫ್ರಾಂಕಿ ಫ್ರಾನ್ಸಿಸ್ ಕುಟಿನ್ನ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ಅಧ್ಯಕ್ಷರಾದ ವಸಂತ ಕೊಣಾಜೆ, ಭಾಗವಹಿಸಿ ಶುಭ ಹಾರೈಸಿದರು.

ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅಧ್ಯಕ್ಷತೆ ವಹಿಸಿ ಉಳ್ಳಾಲ ತಾಲೂಕು ಘಟಕ ನೂತನ ಗೌರವ ಅಧ್ಯಕ್ಷ ಡಾ ಶೇಕ್ ಭಾವ, ಅಧ್ಯಕ್ಷ ಡಿ ಐ ಅಬೂಬಕ್ಕರ್ ಕೈರಂಗಳ , ಪ್ರಧಾನ ಕಾರ್ಯದರ್ಶಿ ಸುಕೇಶ್ ಜಿ.ಕೆ ಉಚ್ಚಿಲ್, ಕೋಶಾಧಿಕಾರಿ ಅರುಣ್ ಡಿಸೋಜಾ, ತಲಪಾಡಿ ಘಟಕ ಅಧ್ಯಕ್ಷ ಸಬೀರ್ ತಲಪಾಡಿ, ತಾಲೂಕು ಕಾರ್ಯಕಾರಿ ‌ಸದ‌ಸ್ಯರಾಗಿ ನೇಮಕಗೊಂಡ ಸಿದ್ದಿಕ್ ಅರ್ಕಣ, ಸಿಯಾಬ್ ತಂಗಳ್, ಸಾಜಿದ್ ಉಳ್ಳಾಲ್, ಸೇರಿದಂತೆ ಇತರ ಪದಾಧಿಕಾರಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಶಾಲು ಹಾಕಿ ದ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಡಾ ಮಂಜುಳಾ ಶೆಟ್ಟಿ, ನಿರೂಪಿಸಿದರು. ಸುಕೇಶ್ ಜಿಕೆ ಉಚ್ಚಿಲ್, ಧನ್ಯವಾದ ಅರ್ಪಣೆ ಮಾಡಿದರು.

About The Author

Leave a Reply