Visitors have accessed this post 537 times.

ಕೇರಳದಲ್ಲಿ ಹೆಚ್ಚುತ್ತಿರುವ ಮೆದುಳು ತಿನ್ನುವ ಅಮೀಬಾ ಸೋಂಕು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಅಲರ್ಟ್ ಘೋಷಣೆ

Visitors have accessed this post 537 times.

ಮಂಗಳೂರು: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಮೀಬಾ ಸೋಂಕು ಲಕ್ಷಣ ಕಂಡುಬಂದರೆ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ನೇಗ್ಲೇರಿಯಾ ಪೌಲೇರಿ ಹೆಸರಿನ ಅಪರೂಪ, ಅಪಾಯಕಾರಿ ಸೂಕ್ಷ್ಮಾಣು ಜೀವಿ ಮೆದುಳು ತಿನ್ನುವ ಅಮೀಬಾ ಆಗಿದೆ. ಮಳೆ ನೀರು, ಕಲುಷಿತ ನೀರಿನ ಹೊಂಡಗಳಲ್ಲಿ ಈಜುವಾಗ ಎಚ್ಚರವಹಿಸುವ ಅಗತ್ಯವಿದೆ. ಕಲುಷಿತ ನೀರಿನಲ್ಲಿ ಈಜುವಾಗ ಈ ಸೋಂಕು ಹರಡುವ ಸಾಧ್ಯತೆ ಇದೆ. ಮೂಗಿನ ಮೂಲಕ ಈ ಅಮೀಬಾ ನಮ್ಮ ಶರೀರ ಸೇರುತ್ತದೆ. ಪರಾವಲಂಬಿಯಲ್ಲದ ಈ ಅಮೀಬಾ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು . ಇದು ಮೆದುಳಿನ ಅಂಗಾಂಕ್ಕೆ ಭಾರಿ ಹಾನಿ ಉಂಟುಮಾಡುವ ಸೂಕ್ಷ್ಮಾಣು ಜೀವಿ. ಕಲುಷಿತ ನೀರಿನ ಹೊಂಡಗಳಲ್ಲಿ ಈಜಾಡದಂತೆ ಆರೊಗ್ಯ ಇಲಾಖೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ.

Leave a Reply

Your email address will not be published. Required fields are marked *