
ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ ಕೊಲೆ ಆರೋಪಿಗಳ 9 ವಾಹನಗಳನ್ನು ಸೀಜ್ ಮಾಡಿದ್ದು, ವಾಹನಗಳ ಕುರಿತು ಮಾಹಿತಿ ನೀಡುವಂತೆ ಆರ್ ಟಿಒ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.



ರೇಣುಕಾಸ್ವಾಮಿ ಕೊಲೆ ಬಳಿಕ ಶವ ಸಾಗಿಸಲು ಬಳಸಿದ್ದ ವಾಹನ ಸೇರಿದಂತೆ ಬೈಕ್, ಸ್ಕಾರ್ಪಿಯೋ ಕಾರು ಸೇರಿದಂತೆ 9 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದೀಗ ಈ ವಾಹನಗಳ ಮಾಲೀಕರು ಯಾರು?
ವಾಹನಗಳು ಯಾರ ಹೆಸರಿನಲ್ಲಿವೆ ಎಂದು ಮಾಹಿತಿ ನೀಡುವಂತೆ ಆರ್ ಟಿಒಗೆ ಪತ್ರ ಬರೆಯಲಾಗಿದೆ.
ರಾಜಾಜೀನಗರ, ಯಶವಂತಪುರ, ಕೋರಮಂಗಲ, ಇಂದಿರಾನಗರ ಹಾಗೂ ತುಮಕೂರಿನ ಆರ್ ಟಿಒ ಕಚೇರಿಗೆ ಪತ್ರ ಬರೆದಿರುವ ಕಾಮಾಕ್ಷಿ ಪಾಳ್ಯ ಪೊಲೀಸರು ವಾಹನಗಳ ಮಾಲೀಕರ ಕುರಿತು ಮಾಹಿತಿ ನೀಡವಂತೆ ಕೋರಿದೆ.