October 27, 2025
WhatsApp Image 2024-07-11 at 4.09.10 PM
ಮೂಲ್ಕಿ:  ಮನೆಗೆ ಶೀಟು ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಯುವಕನೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಕಿನ್ನಿಗೋಳಿ ಸಮೀಪದ ಉಲ್ಲಂಜೆಯಲ್ಲಿ ಸಂಭವಿಸಿದೆ.
ಮೃತಪಟ್ಟ ಯುವಕನನ್ನು‌ ಹಳೆಯಂಗಡಿಯ ಲೈಟ್ ಹೌಸ್ ನಿವಾಸಿ ಅವಿನಾಶ್ ಎಂದು ಗುರುತಿಸಲಾಗಿದೆ.
ಕಿನ್ನಿಗೋಳಿಯ ಉಲ್ಲಂಜೆಯಲ್ಲಿ ಮನೆಯೊಂದಕ್ಕೆ ಶೀಟ್ ಅಳವಡಿಸುವಾಗ, ಕಬ್ಬಿಣದ ಪೈಪ್ ಮೇಲಕ್ಕೆತ್ತುವಾಗ ವಿದ್ಯುತ್ ತಂತಿ ಕಬ್ಬಿಣದ ಪೈಪ್ ಗೆ ತಾಗಿದ್ದು ಕೂಡಲೇ ಅವಿನಾಶ್ ಕುಸಿದು ಬಿದ್ದಿದ್ದು ಅಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ ಪಟ್ಟಿದ್ದಾರೆ.
ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

About The Author

Leave a Reply