100 ‘ED’ ‘CBI’ ತಂಡಗಳು ಬಂದರೂ ಕಾಂಗ್ರೆಸ್ ‘ವೈಟ್ ಟಿ-ಶರ್ಟ್ ಆರ್ಮಿ’ ಹೆದರಲ್ಲ : ಮೊಹಮ್ಮದ್ ನಲಪಾಡ್

ಹುಬ್ಬಳ್ಳಿ : ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಮ್ಮದ್ ನಲಪಾಡ್ ಮಾತನಾಡಿದ್ದು, ನಾವು 100 ED ಅಧಿಕಾರಿಗಳ ತಂಡ ಬಂದರೂ ಹೆದರುವುದಿಲ್ಲ. 100 CBI ಅಧಿಕಾರಿಗಳ ತಂಡ ಬಂದರೂ ಹೆದರುವುದಿಲ್ಲ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸೋಕೆ ಅಧಿಕಾರಿಗಳು ಬಹಳ ಮುಖ್ಯ.

ಅಧಿಕಾರಿಗಳನ್ನು ಕಂಟ್ರೋಲ್ ಮಾಡೋದು ಮಿನಿಸ್ಟರ್ ಕೆಲಸ. ಸದ್ಯ ಬಿ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಿಜೆಪಿಯವರು ಹಗರಣ ಮಾಡಿದಾಗ ಇಡಿ ಅಧಿಕಾರಿಗಳು ಎಲ್ಲಿದ್ದರು? ಬಿಜೆಪಿ ಅವರ ಮೇಲೆ ಯಾವುದಾದರೂ ಕ್ರಮ ತೆಗೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಹರಿಶ್ಚಂದ್ರನ ಮೊಮ್ಮಕ್ಕಳ? ಮಾಜಿ ಸಿಎಂ ಯಡಿಯೂರಪ್ಪನವರು ಜೈಲಿಗೆ ಹೋಗಿದ್ದು ನೆನಪಿಲ್ಲವೇ? ಮಾತಿನ ಭರದಲ್ಲಿ ನಾವೇ ಜೈಲಿಗೆ ಕಳಿಸಿದ್ದೇವೆ ಎಂದ ನಲಪಾಡ್ ಯಡಿಯೂರಪ್ಪರನ್ನು ನಾವೇ ಕಳಿಸಿದ್ದೇವೆ ಎಂದು ಹೇಳಿ ಬಳಿಕ ಅವರ ಸರ್ಕಾರದಲ್ಲಿ ಜೈಲಿಗೆ ಹೋಗಿದ್ದರು ಎಂದು ನಲಪಾಡ್ ಹೇಳಿದರು.

ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸತ್ಯ ಹರಿಶ್ಚಂದ್ರನ ಮೊಮ್ಮಗ ಅಲ್ಲ. ಬೊಮ್ಮಾಯಿ ಸರ್ಕಾರದಲ್ಲಿನ 40% ಕಮಿಷನ್ ಎಲ್ಲಿ ಹೋಯಿತು? ಆಗ ಸಿಬಿಐ ಇಡಿ ಎಲ್ಲಿ ಮಲಗಿತ್ತು? ಈಗ ಓಡೋಡಿ ಬಂದಿದ್ದಾರೆ ಅಂತ ನಲಪಾಡ್ ತೀವ್ರ ಆಕ್ರೋಶ ಹೊರಹಾಕಿದರು.

ಕೋವಿಡ್ ಸಮಯದಲ್ಲಿ ಡಾ.ಕೆ ಸುಧಾಕರ್ ದುಡ್ಡು ಹೊಡೆದರು. ಡಿಕೆ ಶಿವಕುಮಾರ್ ಕೆಸ್ ಬೇರೆ ಯಡಿಯೂರಪ್ಪ ಕೆಸ್ ಬೇರೆ. ಆದರೆ ಬಿಜೆಪಿಯವರು ಡಿಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಈಗ ನಾವು ಯಾವ ಸಿಬಿಐ ಜಾರಿ ನಿರ್ದೇಶನಾಲಯಕ್ಕೆ ಹೆದರಲ್ಲ. 100 ಇಡಿ ತಂಡಗಳು ಬರಲಿ 100 ಸಿಬಿಐ ಬಂದರೂ ಹೆದರುವುದಿಲ್ಲ.

ಕಾಂಗ್ರೆಸ್ನ ವೈಟ್ ಟಿ-ಶರ್ಟ್ ಆರ್ಮಿ ಹೆದರಲ್ಲ. ಮುಡಾ ಹಗರಣ ಬಿಜೆಪಿ ಕಾಲದಲ್ಲಿ ನಡೆದಿದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರುಬ ಸಮುದಾಯದವರು.ಅವರು ಎರಡನೇ ಬಾರಿ ಸಿಎಂ ಆಗಿರುವುದು ಬಿಜೆಪಿಗೆ ಸಹಿಸೋಕೆ ಆಗುತ್ತಿಲ್ಲ ಎಂದು ಹುಬ್ಬಳ್ಳಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೇಳಿಕೆ ನೀಡಿದರು

Leave a Reply