February 1, 2026
WhatsApp Image 2024-07-12 at 3.45.48 PM

ಉಡುಪಿ : ಉಡುಪಿಯಲ್ಲಿ ಸಂಚಲನ ಮೂಡಿಸಿದ್ದ ಗ್ಯಾಂಗ್ ವಾರ್ ಪ್ರಕರಣ ನಡೆಸಿದ್ದ ಗರುಡ ಗ್ಯಾಂಗ್ ಸದಸ್ಯನಿಗೆ ಹಣಕಾಸು ಮತ್ತು ಆಶ್ರಯ ನೀಡಿದ್ದ ಆರೋಪದ ಮೇಲೆ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಟ್ವಾಳದ ಸಫರಾ ( 35) ಬಂಧಿತ ಯುವತಿ. ಉಡುಪಿಯಲ್ಲಿ ಎರಡು ತಿಂಗಳ ಹಿಂದೆ ಗರುಡ ಗ್ಯಾಂಗ್ ನ ಸದಸ್ಯರು ಹೆದ್ದಾರಿಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ ಮೆರೆದಿದ್ದರು.ಈ ತಂಡವು ಯುವಕನ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿತ್ತು. ಗ್ಯಾಂಗ್ ವಾರ್ ಆರೋಪಿಗಳಲ್ಲೋರ್ವ ಇಸಾಕ್ ಎಂಬಾತನಿಗೆ ಸಫರಾ ಎಂಬ ಯುವತಿ ಆರ್ಥಿಕ ಸಹಾಯ ಮಾಡುತ್ತಿದ್ದಳು. ದ.ಕ ಜಿಲ್ಲೆಯ ಉಪ್ಪಿನಂಗಡಿ ಮೂಲದ ಸಫರಾ ಬ್ಯಾಂಕ್ ಅಕೌಂಟ್ ಮೂಲಕ ಆರೋಪಿಗೆ ಹಣ ರವಾನೆ ಮಾಡಿದ್ದು ಬೆಳಕಿಗೆ ಬಂದಿದೆ. ಮಾತ್ರವಲ್ಲ, ಆರೋಪಿಗೆ ಮೊಬೈಲ್ ಫೋನ್ ನೀಡಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದಳು. ಉಡುಪಿ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಈಕೆಯನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

About The Author

Leave a Reply