
ಪಾಟ್ನಾ: ಐಎನ್‌ಡಿಐಎ ಬ್ಲಾಕ್‌ನ ಮಿತ್ರ ಪಕ್ಷ, ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಸಚಿವ ಮುಖೇಶ್ ಸಹಾನಿ ಅವರ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಮನೆಯೊಳಗೆ ಛಿದ್ರಗೊಂಡ ಶವ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮನೆಯಲ್ಲಿ ಜೀತನ್ ಸಹಾನಿ ಹೊರತುಪಡಿಸಿ 2 ರಿಂದ 3 ಜನ ಸೇವಕರು ಹಾಗೂ ಒಬ್ಬ ಚಾಲಕ ವಾಸವಿದ್ದರು. ಜಿತನ್ ಸಾಹ್ನಿ ಅವರನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಲಾಗಿದ್ದು, ಇದರಿಂದಾಗಿ ಅವರ ದೇಹ ಛಿದ್ರಗೊಂಡಿದೆ. ಬಿರಾವುಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಪೌಲ್ನಲ್ಲಿ ನಡೆದಿದೆ. ಘಟನೆಯ ಕುರಿತು ವಿಐಪಿ ಪಕ್ಷದ ನಾಯಕಿ ದೇವ್ ಜ್ಯೋತಿ ಅವರು, ಘಟನೆಯ ಬಗ್ಗೆ ನಮಗೆ ಸ್ವಲ್ಪ ಸಮಯದ ಹಿಂದೆ ಮಾಹಿತಿ ಸಿಕ್ಕಿತು. ಸದ್ಯ ನಮ್ಮ ಪಕ್ಷದ ನಾಯಕ ಮುಖೇಶ್ ಸಹಾನಿ ಮುಂಬೈನಲ್ಲಿದ್ದಾರೆ. ಅವರು ಸ್ವಲ್ಪ ಸಮಯದ ನಂತರ ಪಾಟ್ನಾ ತಲುಪುತ್ತಾರೆ. ಸಹಾನಿ ಅವರ ತಂದೆಯನ್ನು ಏಕೆ ಕೊಲೆ ಮಾಡಲಾಗಿದೆ ಎಂದು ನಮಗೆ ಇನ್ನೂ ತಿಳಿದುಕೊಂಡಿಲ್ಲ. ನಾವು ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಸ್ವಲ್ಪ ಸಮಯದ ನಂತರ ನಮ್ಮ ನಾಯಕರು ಪಾಟ್ನಾ ತಲುಪಿ ನಂತರ ದರ್ಭಾಂಗ ತಲುಪುತ್ತಾರೆ ಎಂದು ತಿಳಿಸಿದರು.


