February 23, 2026
WhatsApp Image 2024-07-17 at 2.20.29 PM

ಮಂಗಳೂರು: ಕಂಕನಾಡಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕರಾವಳಿ ಫೀಡರ್ ಮತ್ತು 110/33/11 ಕೆ.ವಿ. ಜೆಪ್ಪು ಉಪಕೇಂದ್ರದಿಂದ ಹೊರಡುವ 11 ಕೆ.ವಿ. ವೆಲೆನ್ಸಿಯ ಫೀಡರ್ ವಿದ್ಯುತ್ ಮಾರ್ಗಗಳ ವಿವಿಧೆಡೆ ಜುಲೈ 18ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಕರಾವಳಿ ಫೀಡರ್ ಮತ್ತು ವೆಲೆನ್ಸಿಯ ಫೀಡರ್‌ಗಳಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಜಂಪರ್ ಬದಲಾವಣೆ ಹಾಗೂ ಜಿ.ಒ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಮಂಗಳೂರು – ನರ್ಸಿಂಗ್ ಹೋಮ್, ಲೋವರ್ ಮತ್ತು ಅಪ್ಪರ್ ಬೆಂದೂರು, ಕಂಕನಾಡಿ, ಗೋರಿಗುಡ್ಡ, ಉದ್ದೋಡಿ, ಪಂಪ್‌ವೆಲ್,ಸುವರ್ಣ ರಸ್ತೆ ಕಂಕನಾಡಿ ಓಲ್ಡ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

About The Author

Leave a Reply