ಮೊಹರಂ ಮೆರವಣಿಗೆ ವೇಳೆ ಶರಬತ್ತು ಸೇವಿಸಿ 400 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮೊಹರಂ ಮೆರವಣಿಗೆ ವೇಳೆ ಶರಬತ್ತು ಸೇವಿಸಿ ಸೇವಿಸಿ 400 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಬನ್ಸ್ವಾರಾದಲ್ಲಿ ಈ ಘಟನೆ ನಡೆದಿದೆ. ಮೊಹರಂ ಮೆರವಣಿಗೆಯ ಸಮಯದಲ್ಲಿ ಶರಬತ್ತು ಸೇವಿಸಿ ಕುಡಿದ ನಂತರ ಸುಮಾರು 400 ಜನರು ವಾಂತಿ ಭೇದಿಯಿಂದ ಬಳಲಿದ್ದಾರೆ.ನಂತರ ಅಸ್ವಸ್ಥರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.ಈವರೆಗೆ ಸುಮಾರು 400 ಜನರು ಚಿಕಿತ್ಸೆಗಾಗಿ ಮಹಾತ್ಮ ಗಾಂಧಿ ಆಸ್ಪತ್ರೆಗೆ ತಲುಪಿದ್ದಾರೆ ಎಂದು ಸಿಎಂಎಚ್‌ಒ ಡಾ.ಹೀರಾಲಾಲ್ ತಿಳಿಸಿದ್ದಾರೆ.

 

ಮಾಹಿತಿಯ ಪ್ರಕಾರ, ತಾಜಿಯಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಜನರಿಗೆ ಕುಡಿಯಲು ಶರ್ಬತ್ ನೀಡಲಾಯಿತು. ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿರುವ ಹೆಚ್ಚಿನ ಸಂಖ್ಯೆಯ ಜನರಲ್ಲಿ ಮಕ್ಕಳು ಮತ್ತು ವೃದ್ಧರು ಸೇರಿದ್ದಾರೆ. ಘಟನೆ ವರದಿಯಾದ ಕೂಡಲೇ ಪೊಲೀಸ್ ಆಡಳಿತವು ಸ್ಥಳಕ್ಕೆ ತಲುಪಿ ವೈದ್ಯರನ್ನು ಕರೆಸಿತು. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.

Leave a Reply