ಪುತ್ತೂರು: ಕೆಮ್ಮಿಂಜೆ ದೇವಸ್ಥಾನ ಹೋಗುವ ದ್ವಾರದ ಕೂರ್ನಡ್ಕ ಜಂಕ್ಷನ್ ಬಳಿ ಅಪಾಯಕಾರಿ ಮರವೊಂದು ಇವತ್ತೋ ನಾಳೆಯೋ ಬೀಳುವ ಅಪಾಯದ ಸ್ಥಿತಿಯಲ್ಲಿದೆ. ಒಂದು ವೇಳೆ ಇದನ್ನು ತೆರವುಗೊಳಿಸದೇ ಹೋದರೆ ದೊಡ್ಡ ಅನಾಹುತ ಸಂಭವಿಸಬಹುದು ಎಂಬ ಆತಂಕದಲ್ಲಿದ್ದಾರೆ ಸ್ಥಳೀಯರು ಪುತ್ತೂರು ನಗರದಿಂದ ಒಂದು ಕಿಲೋಮೀಟರ್ ದೂರದಲ್ಲಿ ಇರುವ ಈ ಪ್ರದೇಶವು ಜನನಿಬಿಡ ಪ್ರದೇಶ ಕೂಡ ಆಗಿದೆ ಈ ಮರವನ್ನು ತಕ್ಷಣ ತೆರೆವು ಮಾಡದಿದ್ದರೆ ಇದೇ ಮಾರ್ಗದಲ್ಲಿ ದಿನನಿತ್ಯ ಹೋಗುವ ಶಾಲಾ ಮತ್ತು ಮದ್ರಸಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ಈ ಮಾರ್ಗದಲ್ಲಿ ನಿರಂತರವಾಗಿ ವಾಹನ ಸಂಚಾರವೂ ಇರುವುದರಿಂದ ವಾಹನಗಳ ಮೇಲೆಯೂ ಕೂಡ ಬೀಳುವ ಅಪಾಯ ಇದೆ ಅದಲ್ಲದೇ ಅದರ ಹತ್ತಿರವೇ ವಿದ್ಯುತ್ ತಂತಿಗಳೂ ಹಾದು ಹೋಗಿದ್ದು ಮರ ಮುರಿದು ಬಿದ್ದಲ್ಲಿ ಇನ್ನಷ್ಟು ಅನಾಹುತ ಆಗುವ ಸಂಭವ ಇದೆ ಅದ್ದರಿಂದ ತಕ್ಷಣ ಈ ಮರವನ್ನು ತೆರವುಗೊಳಿಸಿ ಮುಂದಿನ ದಿನಗಳಲ್ಲಿ ಸಂಭವಿಸುವ ದೊಡ್ಡ ದುರಂತವನ್ನು ಶಾಸಕರು ಹಾಗೂ ನಗರಸಭಾ ಅಧಿಕಾರಿಗಳು ತಪ್ಪಿಸಬೇಕಾಗಿದೆ. ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.