ಪುತ್ತೂರು: ಲಾರಿ ಟಯರ್ ಸ್ಪೋಟ – ಇಬ್ಬರಿಗೆ ಗಂಭೀರ ಗಾಯ

ಪುತ್ತೂರು : ಲಾರಿಗೆ  ಟಯರ್  ಜೋಡಿಸುತ್ತಿದ್ದ ವೇಳೆ ಒಳಗಿದ್ದ ರಿಂಗ್ ಹೊರಚಿಮ್ಮಿದ್ದು, ಈ ವೇಳೆ ಟಯ‌ರ್ ಸಮೇತ ದುರಸ್ತಿ ಮಾಡುತ್ತಿದ್ದ  ಕೆಲಸಗಾರ ಕೂಡ ದೂರಕ್ಕೆ ಎಸೆಯಲ್ಪಟ್ಟ ಘಟನೆಯೊಂದು  ಘಟನೆ ಪುತ್ತೂರು ಪರ್ಲಡ್ಗ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ. ದುರಸ್ತಿ ಕೆಲಸಗಾರ ಕರಾಯ ನಿವಾಸಿ ರಶೀದ್‌ ಘಟನೆಯಿಂದ ಗಾಯಗೊಂಡಿದ್ದಾರೆ.

ಗೋಳಿಕಟ್ಟೆ ಮಸೀದಿ ಸಮೀಪ ತಲುಪಿದಾಗ ಲಾರಿಯೊಂದರ ಟಯರ್‌ ಪಂಕ್ಚರ್‌ ಆಗಿದೆ. ಅದರ ಚಾಲಕ ಕರಾಯಕ್ಕೆ ತೆರಳಿ ಟಯರ್‌ ಪಂಕ್ಚರ್ ಹಾಕಿಸಿಕೊಂಡು, ದುರಸ್ತಿ ಕೆಲಸಗಾರ ರಶೀದ್ ಜತೆ ವಾಪಸ್ಸು ಪರ್ಲಡ್ಕಕ್ಕೆ ಬಂದಿದ್ದರು. ರಶೀದ್‌ ರಾತ್ರಿ ಟಯರ್‌ ಜೋಡಿಸುತ್ತಿದ್ದ ವೇಳೆ  ಟಯರ್‌ನೊಳಗಿನ ರಿಂಗ್  ಸಿಡಿದು ಹೊರ ಚಿಮ್ಮಿದ್ದೂ  ಅದರ ರಭಸಕ್ಕೆ ಡಿಸ್ಕ್ ಸಮೇತ ರಶೀದ್ ರವರು ರಸ್ತೆ ಬದಿಯ ಪಕ್ಕದ ಆವರಣಗೋಡೆಗೆ ಎಸೆಯಲ್ಪಟ್ಟಿದ್ದಾರೆ.

ಘಟನೆಯಿಂದ ತೀವ್ರ ಗಾಯಗೊಂಡ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.ಟಯರ್ ಜೋಡಣೆ ವೇಳೆ  ಸಮೀಪವೇ ನಿಂತಿದ್ದ ಲಾರಿ ಚಾಲಕನಿಗೂ ಸಣ್ಣಪುಟ್ಟ ಗಾಯವಾಗಿದೆ.

Leave a Reply