
ಬಂಟ್ವಾಳ ತಾಲೂಕಿನ ಕಸ್ಬಾ ಗ್ರಾಮದ ಕೆಳಗಿನಪೇಟೆಯಲ್ಲಿರುವ ಗ್ರಾಮಾಂತರ ಆರಕ್ಷಕ ಠಾಣೆಯ ಮಹಮ್ಮದಾಲಿ ರಸ್ತೆ ಭಾಗದಲ್ಲಿರುವ ಆವರಣಗೋಡೆಯು ಕುಸಿದಿದ್ದು, ಇನ್ನೊಂದು ಭಾಗವು ಕುಸಿಯುವ ಭೀತಿಯಿದೆ.



ಈ ಭಾಗದಲ್ಲಿ ಹೋಗಿಬರುವ ಶಾಲಾ ಮಕ್ಕಳ ಪೋಷಕರು ಆತಂಕದಿಂದಿದ್ದು, ಈ ಪರಿಸ್ಥಿತಿಯನ್ನರಿತ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರಲ್ಲದೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗಳಿಗೆ ಕರೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿರುತ್ತಾರೆ.
ಈ ಸಂದರ್ಭದಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮತ್ತು ಚರಂಡಿ ವ್ಯವಸ್ಥೆಯ ಬಗ್ಗೆಯು ರಮಾನಾಥ ರೈಯವರ ಗಮನಕ್ಕೆ ತರಲಾಯಿತು. ಶ್ರೀ ಬೇಬಿ ಕುಂದರ್, ಪರಸಭಾ ನಾಮ ನಿರ್ದೇಶಿತ ಸದಸ್ಯ ರಿಯಾಝ್, ಮಸೀದಿ ಮತ್ತು ತೌಹೀದ್ ಶಾಲಾ ಆಡಳಿತ ಸಮಿತಿ ಸದಸ್ಯರು, ಸ್ಥಳೀಯರಾದ ಇಸ್ಮಾಯಿಲ್,ಮುಸ್ತಫ,ಶೌಕತ್ ಅಲಿ,ಬಶೀರ್,ಹಿಫಾಝತ್ ಮೊದಲಾದವರು ಹಾಜರಿದ್ದರು.