August 30, 2025
WhatsApp Image 2024-07-24 at 10.30.47 AM

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊಲೆ ಮಾಡಲೆಂದೇ ಊರಿಗೆ ಬಂದು ತನ್ನ ಸ್ವಂತ ಅಣ್ಣನ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.. ಪಿಸ್ತೂಲ್‌ನಿಂದ ಗುಂಡು ಹಾರಿಸಿ ಈ ಕೊಲೆ ಮಾಡಲಾಗಿದೆ.. ಗುಡಿಬಂಡೆ ತಾಲ್ಲೂಕು ಹಂಪಸಂದ್ರದಲ್ಲಿ ಈ ಕೃತ್ಯ ಎಸಗಲಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ..

ನಜೀರ್‌ ಅಹ್ಮದ್‌ ಎಂಬಾತನೇ ಕೊಲೆಯಾಗಿರುವ ವ್ಯಕ್ತಿಯಾಗಿದ್ದಾರೆ.. ಈತನ ಚಿಕ್ಕಪ್ಪ 66 ವರ್ಷದ ಬಶೀರ್‌ ಅಹ್ಮದ್‌ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಾರೆ.. ಇತ್ತೀಚೆಗೆ ಚಿಕ್ಕಪ್ಪ ಬಶೀರ್‌ ಊರಿಗೆ ಬಂದಿದ್ದ.. ಯಾವ ಕಾರಣಕ್ಕೋ ಜಗಳವಾಗಿದ್ದು, ಪಿಸ್ತೂಲ್‌ ತೆಗೆದು ಸ್ವಂತ ಅಣ್ಣನ ಮಗ ನಜೀರ್‌ ಅಹ್ಮದ್‌ನನ್ನು ಕೊಲೆ ಮಾಡಿದ್ದಾರೆ..
ಇತ್ತ, ಗಲಾಟೆ ಬಿಡಿಸಲು ಬಂದ ನಜೀರ್‌ ಅಹ್ಮದ್‌ ತಂದೆ ಹಾಗೂ ಆರೋಪಿಯ ಅಣ್ಣ ಮಾಬೂಸಾಬಿ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಮಾಬೂಸಾಬಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ..

ಯಾವ ಕಾರಣಕ್ಕೆ ಈ ಜಗಳ ನಡೆಯಿತು ಅನ್ನೋದು ಗೊತ್ತಾಗಿಲ್ಲ.. ವಿಚಾರಣೆಯಿಂದ ಗೊತ್ತಾಗಲಿದೆ.. ಚಿಕ್ಕಬಳ್ಳಾಪುರ ಭಾಗದಲ್ಲಿ ಪಿಸ್ತೂಲ್‌ ಇಟ್ಟುಕೊಂಡವರು ತುಂಬಾ ಕಡಿಮೆ.. ಹಾಗೆಯೇ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡುವ ಪ್ರಕರಣಗಳು ನಡೆಯೋದು ಕೂಡಾ ಇಲ್ಲ.. ಹೀಗಾಗಿ, ಇಂತಹ ಪ್ರದೇಶದಲ್ಲಿ ಶೂಟೌಟ್‌ ನಡೆದಿರುವುದು ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ..

About The Author

Leave a Reply