
ಬೆಂಗಳೂರು : ಇತ್ತೀಚಿಗೆ ಬೆಂಗಳೂರಲ್ಲಿ ದಿನಕ್ಕೊಂದು ಕೊಲೆ, ದರೋಡೆ, ಸುಲಿಗೆ ಪ್ರಕರಣಗಳ ಸಂಖ್ಯೆ ಜಾಸ್ತಿ ಆಗುತ್ತಿವೆ. ಪೊಲೀಸರು ಎಷ್ಟೇ ಕಠಿಣವಾದ ಕ್ರಮ ಕೈಗೊಂಡರು ಸಹ ಇಂತಹ ಘಟನೆಗಳು ನಿಲ್ಲುತ್ತಿಲ್ಲ.ಇದೀಗ ಲೇಡಿಸ್ ಪಿಜಿಗೆ ನುಗ್ಗಿ ಯುವಕನೋರ್ವ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಕೋರಮಂಗಲದ ವಿಆರ್ ಲೇಔಟ್‌ನಲ್ಲಿ ನಡೆದಿದೆ.



ಹೌದು ಬೆಂಗಳೂರಿನ ಕೋರಮಂಗಲದ ವಿಆರ್ ಲೇಔಟ್‌ನ ಪಿಜಿ ಒಂದರಲ್ಲಿ ಯುವತಿ ವಾಸಿಸುತ್ತಿದ್ದಳು. ಟೆಕ್ ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ್ ಮೂಲದ ಕೃತಿ ಕುಮಾರಿ (24) ಎನ್ನುವ ಯುವತಿಯನ್ನು ಆತನ ಪ್ರಿಯಕರ ಬೀಜಿಗೆ ನುಗ್ಗಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವಂತಹ ಘಟನೆ ನಡೆದಿದೆ.
ನಿನ್ನೆ ಲಗೇಜ್ ತೆಗೆದುಕೊಂಡು ಬಂದಿದ್ದ ಯುವಕನನ್ನ ಪಿಜಿ ಸೆಕ್ಯೂರಿಟಿ ಒಳ ಬಿಡುವುದಿಲ್ಲ ಎಂದಿದ್ದನಂತೆ. ನಂತರ ಪಿಜಿ ಸೆಕ್ಯುರಿಟಿ ಬಳಿ ನನ್ನ ಸಹೋದರ ಎಂದು ಹೇಳಿ ಬೇಗ ಕಳುಹಿಸುತ್ತೇನೆ ಎಂದು ಒಳ ಕರೆದುಕೊಂಡು ಕೃತಿ ಕುಮಾರಿ ಹೋಗಿದ್ದಳು.ರಾತ್ರಿ 11:10ರ ವೇಳೆಗೆ ಯುವಕ ಚಾಕು ಸಮೇತ ಪಿಜಿಯೊಳಗೆ ಬಂದಿದ್ದಾನೆ. ಮೂರನೇ ಮಹಡಿಯಲ್ಲಿರುವ ರೂಂ ಬಳಿ ಚಾಕುವಿನಿಂದ ಹಲ್ಲೆ ನಡೆಸಿದ್ದು, ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ರಾತ್ರಿ 11:30 ಕ್ಕೆ ಕೃತಿ ಕುಮಾರಿಯೇ ಯುವಕನನ್ನ ಕರೆದೊಯ್ಯಿರುವ ಮಾಹಿತಿ ಸಿಕ್ಕಿದ್ದು, ಪಿಜಿಯಿಂದ ಹೊರ ಬಂದು ರಾತ್ರಿ ಊಟ ಮಾಡಿ ಕೃತಿ ಕುಮಾರಿ ಹಾಗೂ ಯುವಕ ಪಿಜಿಗೆ ವಾಪಸ್ ಆಗಿದ್ದಾರೆ. ಈ ವೇಳೆ ಕೃತಿಕುಮಾರಿಯೇ ಆತನನ್ನ ಕರೆದೊಯ್ದಿರುವ ಸಿಸಿಟಿವಿ ದೃಶ್ಯ ಪೊಲೀಸರಿಗೆ ಲಭ್ಯವಾಗಿದ್ದು, ನಂತರ ರೂಂ ನಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಯ ಮಾಹಿತಿಯನ್ನು ಕೊರಮಂಗಲ ಪೊಲೀಸರು ಕಲೆ ಹಾಕುತ್ತಿದ್ದಾರೆ.