

ಕರ್ನಾಟಕ ಮಾನ್ಯ ಉಚ್ಚನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 19033/2023 ರಲ್ಲಿ ದಿನಾಂಕ 15/11/2023 ರಂದು ನೀಡಿರುವ ಆದೇಶದಲ್ಲಿ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿಯಿಂದ ನಗರ,ಸ್ಥಳೀಯ ಸಂಸ್ಥೆಯಿಂದ ವಿನ್ಯಾಸ ಮಂಜೂರಾಗಿದ್ದು,ಇದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಕಲಂ 17 ರಲ್ಲಿ ಕಲ್ಪಿಸಿರುವ ಅವಕಾಶಕ್ಕೆ ವ್ಯತ್ತಿರಿಕ್ತವಾಗಿದ್ದು ಈ ಅನುಮೋದನೆಗಳ ವಿರುದ್ದ ದೂರು ಸ್ವೀಕರಿಸಿದ ಹಿನ್ನಲೆಯಲ್ಲಿ ವಿನ್ಯಾಸ ನಕ್ಷೆ ಮತ್ತು ಖಾತೆಗಳನ್ನು ರದ್ದುಗೊಳಿಸಿ ಆದೇಶಿಸಿದ್ದು,ಇದು ಮೂರನೇ ವ್ಯಕ್ತಿಯ ಖರೀದಿದಾರರ ಹಿತಾಸಕ್ತಿಗಳನ್ನು ಒಳಗೊಂಡಿದ್ದು ಅನಾವಶ್ಯಕ ವಿವಾದಗಳಿಗೆ ಕಾರಣವಾಗಿರುವುದರಿಂದ ಇಂತಹ ಸಮಸ್ಯೆಗಳನ್ನು ನಿಯಂತ್ರಿಸಲು ರೂಪುರೇಷೆಗಳನ್ನು ರಚಿಸಲು ಸರ್ಕಾರಕ್ಕೆ ಸೂಚಿಸಿರುತ್ತದೆ.ಸದರಿ ಆದೇಶಗಳ ಹಿನ್ನಲೆಯಲ್ಲಿ ಈ ಹಿಂದಿನ ಪ್ರಸ್ತಾವನೆಯನ್ನು ತಡೆಹಿಡಿದು 2014 ಪೂರ್ವದಲ್ಲಿದ್ದಂತೆ ಸ್ಥಳೀಯ ಯೋಜನಾ ಪ್ರದೇಶದ ಹೊರತಾದ ಗ್ರಾಮಾಂತರ ಪ್ರದೇಶದಲ್ಲಿ ಭೂಪರಿವರ್ತಿತ ಎಕ ನಿವೇಶನ ನೀಡುವಂತೆ ಮತ್ತು ಈಗೀನ ತೊಂದರೆಯ ಬಗ್ಗೆ ಮತ್ತು ಅದಕ್ಕಿರುವ ಪರಿಹಾರ ಮಾರ್ಗದ ಬಗ್ಗೆಯೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲ್ ಸುಭಾಶ್ಚಂದ್ರ ಶೆಟ್ಟಿ ನೇತೃತ್ವದ ತಂಡ ದ.ಕ.ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಸಭಾಧ್ಯಕ್ಷರಾದ ಯು.ಟಿ.ಖಾದರ್ ,ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಸಹಿತ ನಾಯಕರುಗಳಲ್ಲಿ ಸರಕಾರದ ಗಮನಸೆಳೆಯಲು ಮನವಿ ಸಲ್ಲಿಸಿತ್ತು…


ಈ ಗ ಮನವಿಯನ್ನು ಗಂಬೀರವಾಗಿ ತೆಗೆದುಕೊಂಡ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಅದರ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹೆಸರು ಪ್ರಸ್ತಾಪಿಸಿ ಸರಕಾರದ ಗಮನಸೆಳೆದರು.ಅಲ್ಲದೇ ಇದರ ಮುಂದುವರಿದ ಭಾಗವಾಗಿ ವಿಧಾನ ಸಭೆಯಲ್ಲಿ ಕರಾವಳಿ ಭಾಗದ ಪುತ್ತೂರು ಶಾಸಕರಾದ ಆಶೋಕ್ ರೈ ಗಂಭೀರವಾಗಿ ಮಾತಾಡಿ ಸಭಾದ್ಯಕ್ಷರ ಸಂಭಂದಪಟ್ಟ ಇಲಾಖೆಯ ಗಮನಸೆಳೆಯುವಲ್ಲಿ ಯಶಸ್ವಿಯಾದರು.ಇಂದು ಸಭಾಧ್ಯಕ್ಷರಾದ ಯು.ಟಿ.ಖಾದರ್ ಸಭೆಕರೆದು ಈ ಹಿಂದೆ ಪಂಚಾಯತ್ ರಾಜ್ ಸಂಘಟನೆ ಇಟ್ಟಿದ್ದ,ಜಿ.ಪಂಚಾಯತ್ ಇಂಜಿನಿಯರ್ ಗಳಿಗೆ,ತಾಲೂಕು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ಕೊಟ್ಟಲ್ಲಿ ಪರಿಹಾರವಾಗಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.ಅದರಂತೆ ಈ ದಿನ ಮಾನ್ಯ ಸಭಾಧ್ಯಕ್ಷರಾದ ಯುಟಿ ಖಾದರ್ ಮಂಜುನಾಥ ಭಂಡಾರಿ,ಆಶೋಕ್ ಕುಮಾರ್ ರೈ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಸಚಿವರ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಂಡರು.ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ,ಪೌರಾಡಳಿತ ಸವಿವರಾದ ರಹೀಂ ಖಾನ್,ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ,ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಸಹಿತ ವಿವಿಧ ಸಂಭಂದಪಟ್ಟ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಈ ಎಲ್ಲಾ ಉತ್ತಮ ಬೆಳವಣಿಗೆಯ ಬಗ್ಗೆ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲ್ ಸುಭಾಶ್ಚಂದ್ರ ಶೆಟ್ಟಿ ಯವರು,ಸಭಾಧ್ಯಕ್ಷರಾದ ಯು.ಟಿ.ಖಾದರ್,ಸಚಿವರಾದ ದಿನೇಶ್,ಗುಂಡೂರಾವ್,ಪ್ರಿಯಾಂಕ ಖರ್ಗೆ,ರಹೀಂ ಖಾನ್,ಕೃಷ್ಣ ಬೈರೆಗೌಡ,ಮಂಜುನಾಥ ಭಂಡಾರಿ,ಅಶೋಕ್ ಕುಮಾರ್ ರೈ ಸಹಿತ ಜಿಲ್ಲೆಯ ಎಲ್ಲಾ ಶಾಸಕರಿಗೆ ಇಲಾಖೆಗಳಿಗೆ ಅಭಿನಂದನೆ ಸಲ್ಲಿಸಿದರು..







