
ಪುತ್ತೂರ: ಕೆಮ್ಮಿಂಜೆ ದೇವಸ್ಥಾನ ಹೋಗುವ ದ್ವಾರದ ಕೂರ್ನಡ್ಕ ಜಂಕ್ಷನ್ ಬಳಿ ಅಪಾಯಕಾರಿ ಮರವೊಂದು ಇವತ್ತೋ ನಾಳೆಯೋ ಬೀಳುವ ಅಪಾಯದ ಸ್ಥಿತಿಯಲ್ಲಿ ಇರುವುದನ್ನು ಕಂಡು ಸ್ಥಳೀಯರು ನಮ್ಮ ಮಾದ್ಯಮದ ಗಮನ ತಂದಿದ್ದು.



ಒಂದು ವೇಳೆ ಈ ಬೃಹತ್ ಅಪಾಯಕಾರಿ ಮರವನ್ನು ತೆರವುಗೊಳಿಸದೇ ಹೋದರೆ ಮುಂದೊಂದು ದಿನ ದೊಡ್ಡ ಅನಾಹುತ ಸಂಭವಿಸಬಹುದು ಎಂಬ ಆತಂಕದಲ್ಲಿ ಇದ್ದರು ಸ್ಥಳೀಯರು ..ಈ ಎಚ್ಚರಿಕೆ ಸಂದೇಶವನ್ನು ನಾವು ಸ್ಥಳೀಯ ನಿವಾಸಿಗಳ ಹಾಗೂ ನಮ್ಮ ಮಾದ್ಯಮದ ಮೂಲಕ ಪುತ್ತೂರು ಶಾಸಕರು ಹಾಗೂ ಪುತ್ತೂರು ನಗರಸಭಾ ಅಧಿಕಾರಿಗಳಿಗೆ ಮನವಿ ಮಾಡಿದ್ದು ತಕ್ಷಣ ಸ್ಪಂದಿಸಿದ ಶಾಸಕರು ಹಾಗೂ ನಗರಸಭಾ ಅಧಿಕಾರಿಗಳು ಮತ್ತು ಮೆಸ್ಕಾಂ ಅಧಿಕಾರಿಗಳು ಆ ಮರವನ್ನು ತೆರವುಗೊಳಿಸಿ ದೊಡ್ಡ ಅಪಾಯವನ್ನು ತಪ್ಪಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.