
ಕಂಗೆನ್ ಡಿಸ್ಟ್ರಿಬ್ಯೂಟರ್ ಕ್ಲಬ್ (ಕೆಡಿಸಿ) ಮಂಗಳೂರು ಆಶ್ರಯದಲ್ಲಿ ಜುಲೈ 28 ನೇ ಆದಿತ್ಯವಾರ ಬೆಳಗ್ಗೆ 10.30 ಕ್ಕೆ ಸರಿಯಾಗಿ ಕಂಗ್ಯನ್ ಆಟಿದ ಕೂಟ ಆಯೋಜಿಸಲಾಗಿದೆ ಎಂದು ಕೆಡಿಸಿಯ ನಿರ್ದೇಶಕ ಶ್ರೀ ರಾಜೇಶ್ ನಾಯರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುಮಾರಿ ನಿರೀಕ್ಷಾ ಶೆಟ್ಟಿ,ಖ್ಯಾತ ಚಲನಚಿತ್ರ ನಟಿ ನಡೆಸಲಿದ್ದಾರೆ, ತುಳು ಆಟಿ ಆಚರಣೆ ಹಾಗೂ ತುಳು ಜೀವನ ಪದ್ಧತಿಯ ಬಗ್ಗೆ ಶ್ರೀಮತಿ ವೀಣಾ ಟಿ ಶೆಟ್ಟಿ ನಿವೃತ್ತ ಮಹಾ ಪ್ರಬಂಧಕರು ಎಂ ಆರ್ ಪಿ ಎಲ್ ಇವರು ದಿಕ್ಸೂಚಿ ಭಾಷಣ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜೇಶ್ ನಾಯರ್, ನಿರ್ದೇಶಕರು,ಕೆಡಿಸಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ತಾರನಾಥಗಟ್ಟಿ -ಅಧ್ಯಕ್ಷರು ತುಳು ಸಾಹಿತ್ಯ ಅಕಾಡೆಮಿ
ಶ್ರೀ ಡಾ. ಎಂ ಪಿ ಶ್ರೀನಾಥ್- ಅಧ್ಯಕ್ಷರು ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಶ್ರೀ ಉಮರ್ ಯು ಎಚ್- ಅಧ್ಯಕ್ಷರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
ಶ್ರೀ ಜೋಕಿಂ ಸ್ಯಾನಿ ಹಲ್ವಾರೀಸ್ -ಅಧ್ಯಕ್ಷರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
ಶ್ರೀ ಪಿ ಶ್ರೀಧರ್- ಸಹಾಯಕ ಅರಣ್ಯಾಧಿಕಾರಿ,ಮಂಗಳೂರು ಉಪ ವಿಭಾಗ ಇವರು ಭಾಗಿಯಾಗಲಿದ್ದಾರೆ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದ ತುಳುನಾಡಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ: ಅಳಿವಿನಂಚಿನಲ್ಲಿರುವ ತುಳು ಬದುಕಿನ, ತುಳುನಾಡಿನ, ತುಳು ಸಂಸ್ಕೃತಿಯ ನೂರಕ್ಕೂ ಮೇಲ್ಪಟ್ಟು ಪರಿಕರಗಳ ಪ್ರದರ್ಶನ :ಆಟಿ ತಿಂಗಳಲ್ಲಿ ತುಳುನಾಡಿನ ಜನರು ಸೇವಿಸುತ್ತಿದ್ದ ವಿಶಿಷ್ಟ ತಿಂಡಿ ತಿನಿಸು: ತುಳುನಾಡಿನ ಜನಪದ ಸಂಸ್ಕೃತಿಗೆ ಸಂಬಂಧಪಟ್ಟ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಸಂಚಾಲಕರಾದ ಶ್ರೀ ಸತ್ಯನಂಜನ್ ಭಂಡಾರಿ ಹಾಗೂ ಶ್ರೀಮತಿ ರಾಜೇಶ್ವರಿ ಡಿ ಶೆಟ್ಟಿ ಮತ್ತು ಸಂಚಾಲಕರಾದ ಶ್ರೀ ಗಣೇಶ್ ಎಚ್ ಆರ್, ರಾಜೇಶ್ ಪಾಟಾಳಿ,ಅನೀಶ್ ಬಾಲನ್ ಮತ್ತು ನಚಿಕೇತ್ ಉಪಸ್ಥಿತರಿದ್ದರು.


