ಉಳ್ಳಾಲ: ಆಟೋ ರಿಕ್ಷಾ ಚಾಲಕ ನಾಪತ್ತೆ..!

ಉಳ್ಳಾಲ: ಆಟೋ ರಿಕ್ಷಾ ಚಾಲಕರೋರ್ವರು ನಾಪತ್ತೆಯಾಗಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ . ಉಳ್ಳಾದ ಮಡ್ಯಾರ್ ನಿವಾಸಿ ಮೆಲ್ವಿನ್ ಮೋಂತೆರೋ (56) ನಾಪತ್ತೆಯಾದ ರಿಕ್ಷಾ ಚಾಲಕ. ಕೋಟೆಕಾರಿನ ಖಾಸಗಿ ಶಾಲೆಯೊಂದರ ಬಳಿ ಬೆಳಗ್ಗೆ ರಿಕ್ಷಾ ಬಾಡಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದಾರೆನ್ನಲಾಗಿದೆ. ರಾತ್ರಿಯಾದರೂ ಮನೆಗೆ ವಾಪಸ್ ಬಾರದೆ ಇದ್ದಾಗ ಮನೆ ಮಂದಿ ಸಂಬಂಧಿಕರ ಬಳಿ ವಿಚಾರಿಸಿದಾಗಲೂ ಪತ್ತೆಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಮೆಲ್ವಿನ್ ಮೋಂತೆರೋರವರ ಪತ್ನಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇನ್ನು, ಮೆಲ್ವಿನ್ ಮೋಂತೆರೋ ಎಲ್ಲಿಯಾದರು ಕಂಡು ಬಂದಲ್ಲಿ 9844916342 ಈ ಸಂಖ್ಯೆಗೆ ಮಾಹಿತಿ ನೀಡಬೇಕೆಂದು ಮನೆ ಮಂದಿ ವಿನಂತಿಸಿದ್ದಾರೆ.

Leave a Reply