ಕಾರ್ಗಿಲ್ ವಿಜಯ ದಿವಸ: ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಅಪ್ಪು ಶೆಟ್ಟಿಯವರಿಗೆ ಸಮ್ಮಾನ

ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ಯುವ ಮೋರ್ಚಾ ವತಿಯಿಂದ “ವೀರ ಮರಣ ಹೊಂದಿದ ಹುತಾತ್ಮ ಯೋಧರಿಗೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಲಾಯ್ತು.
ಕದ್ರಿಯ ಯುದ್ಧ ಸ್ಮಾರಕದಲ್ಲಿ ಯುವ ಮೋರ್ಚಾ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ ನೇತೃತ್ವದಲ್ಲಿ ಯೋಧರಿಗೆ ನಮನ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಅಪ್ಪು ಶೆಟ್ಟಿಯವರಿಗೆ ಸಮ್ಮಾನ ಕಾರ್ಯ ನಡೆಯಿತು. ಬಿಜೆಪಿ ದಕ್ಷಿಣ ಮಂಡಲ ಯುವ ಮೋರ್ಚಾ ಅಧ್ಯಕ್ಷ ಅಶ್ವಿಥ್ ಕೊಟ್ಟಾರಿ ಪ್ರಾಸ್ತಾವಿಕ ವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.

ಈ ವೇಳೆ ಬಿಜೆಪಿ ಹಿರಿಯ ಮುಖಂಡ ರವಿಶಂಕರ್ ಮಾತನಾಡಿ,ಸೈನಿಕರು ದೇಶಕ್ಕಾಗಿ ಸೇವೆ ಮಾಡುತ್ತಾರೆ, ಅವರಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಮಂಡಲ ಅಧ್ಯಕ್ಷರಾದ ರಮೇಶ್ ಕಂಡೇಟ್ಟು ಜಿಲ್ಲಾ. ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಎಂ ಮುಖಂಡರಾದ ರವಿಶಂಕರ್ ಮಿಜಾರ್ ನಿತಿನ್ ಕುಮಾರ್, ಮಹೇಶ್ ಜೋಗಿ, ರಮೇಶ್ ಹೆಗ್ಡೆ, ಪೂರ್ಣಿಮಾ ರಾವ್,
, ಪಾಲಿಕೆ ಸದಸ್ಯರಾದ ಶಕೀಲಾ ಕಾವ, ಲೀಲಾವತಿ, ಶೈಲೇಶ್ ಶೆಟ್ಟಿ, , ಸಂದೀಪ್ ಗರೋಡಿ, ವೀಣಾ ಮಂಗಳಾ, , ಜಗದೀಶ್ ಶೆಟ್ಟಿ ಬೋಳೂರು, ಋತ್ವಿಕ್ ಕದ್ರಿ, ಮೌನೇಶ್ ಚೌಟ, ರಮೇಶ್ ಹೆಗ್ಡೆ, ಯುವ ಮೋರ್ಚ ಪದಾದಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಿಸಲಾಯಿತು.

Leave a Reply