Visitors have accessed this post 509 times.

ಕೇರಳದ ವಯನಾಡಲ್ಲಿ ಸರಣಿ ಭೂಕುಸಿತ ಪ್ರಕರಣ : 5 ಮಕ್ಕಳು ಸೇರಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆ

Visitors have accessed this post 509 times.

ಕೇರಳ : ಇಂದು ಕೇರಳದ ವಯನಾಡ್ ನಲ್ಲಿ ಭೂಕುಸಿತ ದುರಂತದಿಂದ ಮೃತಪಟ್ಟವರ ಸಂಖ್ಯೆ ಇದೀಗ 41ಕ್ಕೆ ಏರಿಕೆಯಾಗಿದೆ. ಐವರು ಮಕ್ಕಳು ಸೇರಿ ಈವರೆಗೂ 41 ಜನರ ಮೃತದೇಹ ಪತ್ತೆಯಾಗಿದೆ.

ನೆಪ್ಪಾಡಿ, ಮುಂಡಕೈ, ಚುರಲ್, ಮಲ ಗ್ರಾಮದಲ್ಲಿ ಈ ಒಂದು ಭೂಕುಸಿತ ದುರಂತ ನಡೆದಿದೆ. 180ಕ್ಕೂ ಅಧಿಕ ಜನ ಸಿಲುಕಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ.

ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಎನ್ ಡಿ ಆರ್‌ಎಫ್ ಸಿಬ್ಬಂದಿ, ಅಗ್ನಿಶಾಮಕದಳ ಸಿಬ್ಬಂದಿ ಜೊತೆಗೆ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಇದೀಗ ಮುಂದುವರೆದಿದೆ.

ರಾಜ್ಯ ಆರೋಗ್ಯ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಸಹಾಯ ಬಯಸುವವರಿಗಾಗಿ ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿ ಸಂಖ್ಯೆಗಳನ್ನು (9656938689 ಮತ್ತು 8086010833) ಬಿಡುಗಡೆ ಮಾಡಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳಿಗೆ ವಯನಾಡ್ ಗೆ ತೆರಳಲು ಆದೇಶಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ವಯನಾಡ್ ಮತ್ತು ಇತರ 9 ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಈಗಾಗಲೇ ಮುಚ್ಚಲಾಗಿದೆ.

ವಯನಾಡ್ ನಲ್ಲಿ ಇಂದು ಮುಂಜಾನೆಯಿಂದ ಸತತವಾಗಿ ಮೂರು ಗ್ರಾಮಗಳಲ್ಲಿ ಸಾಲು ಸಾಲು ಭೂ ಕುಸಿತ ಸಂಭವಿಸಿದೆ. ಪ್ರವಾಹದಂತೆ ಹರಿದು ಬಂದ ನೀರಿನ ರಭಸಕ್ಕೆ ಮನೆಗಳು, ಅಂಗಡಿಗಳು ಕೊಚ್ಚಿ ಹೋಗಿವೆಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿ, ಎನ್ ಡಿ ಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

Leave a Reply

Your email address will not be published. Required fields are marked *