November 28, 2025
WhatsApp Image 2024-07-31 at 9.47.22 AM

ಸಿರವಾರ(ರಾಯಚೂರು) : ಪಟ್ಟಣದ ಬಸ್ ನಿಲ್ದಾಣ ಹಿಂದಿರುವ ಮುಸ್ಲಿಂ ಪ್ರಾರ್ಥನಾ ಮಂದಿರದಲ್ಲಿ ಮದ್ಯದ ಬಾಟಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿ ಯುವಕರನ್ನು ಬಂಧಿಸಿದ್ದಾರೆ.

ಕೆಲ ಯುವಕರು ಮದ್ಯ ಕುಡಿದು ಬಿಯರ್ ಬಾಟಲಿಯನ್ನು ಮಸೀದಿ ಒಳಗಡೆ ಎಸೆದಿದ್ದರು.

ವಿಷಯ ತಿಳಿದ ಮುಸ್ಲಿಂ ಸಮುದಾಯದವರು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ತಡರಾತ್ರಿ ಮುಖ್ಯರಸ್ತೆ ತಡೆದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಎಎಸ್ಪಿ ಶಿವಕುಮಾರ, ಡಿವೈಎಸ್ಪಿ ಬಿಎಸ್ ತಳವಾರ, ಸಿಪಿಐ ಶಶಿಕಾಂತ, ಪಿಎಸ್‌ಐ ಗುರುಚಂದ್ರ ಯಾದವ್ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ಮಾತನಾಡಿ ಆರೋಪಿಗಳ ಬಂಧನ ಮಾಡುವ ಭರವಸೆ ನೀಡಿದರು.

ಬಳಿಕ ಪ್ರಕರಣಕ್ಕೆ ಸಂಬಂಧಿಸಿ 7 ಯುವಕರನ್ನು ಬಂಧಿಸಲಾಗಿದೆ. ಈ ಕುರಿತು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply