ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜಪ್ಪಿನಮೊಗರು ಮಂಗಳೂರು ಇದರ ಆಶ್ರಯದಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಇದೇ ತಾ.06.09.2024ನೇ ಶುಕ್ರವಾರದಿಂದ ತಾ.08.09.20024ನೇ ಆದಿತ್ಯವಾರದವರೆಗೆ
ಊರ ಹಾಗೂ ಪರಊರ ಭಕ್ತಾಭಿಮಾನಿಗಳ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸಲಾಗುವುದು.
ತಾ. 06.09.2024ನೇ ಶುಕ್ರವಾರದಂದು ಸಂಜೆ 4.00 ಗಂಟೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಜಪ್ಪಿನಮೊಗರು ಶ್ರೀ ವೈದ್ಯನಾಥ ಮಹಾದ್ವಾರದಿಂದ ಶ್ರೀ ವಿಶ್ವೇಶ್ವರನ ವಿಗ್ರಹವನ್ನು ಶ್ರೀ ಗಣೇಶ ಮಂಟಪಕ್ಕೆ ತರಲಾಗುವುದು. ಆನಂತರ
ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಭಾ ಕಾರ್ಯಕ್ರಮವನ್ನು ಶ್ರೀಮತಿ ಶ್ವೇತಾ ಮತ್ತು ಶ್ರೀ ದೀಪಕ್ ಹೆಚ್ ಕೆ. ಕಂರ್ಬೆಟ್ಟು, ಮಂಗಳೂರು ಇವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ಶ್ರೀ ಸದಾಶಿವ ಉಳ್ಳಾಲ್
(ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಉರ್ವಸ್ಟೋರ್) ಶ್ರೀ ಅರುಣ್ ಐತಾಳ್ ಆಡಳಿತ ಮೊಕೇಸರರು, ಶ್ರೀ ಮಂಗಳಾದೇವಿ ದೇವಸ್ಥಾನ ಇವರು ಆಶೀರ್ವದಿಸಲಿದ್ದು, ಶ್ರೀ ನಳೀನ್ ಕುಮಾರ್ ಕಟೀಲ್ (ಮಾಜಿ ಲೋಕಸಭಾ
ಸದಸ್ಯರು) ಉದ್ಯಮಿ ಎ.ಜೆ.ಶೆಟ್ಟಿ ಮೊದಲಾದ ಗಣ್ಯರು ಭಾಗವಹಿಸಲಿರುವರು. ನಂತರ ರಾತ್ರಿ 9.00 ಗಂಟೆಗೆ ಡಾ| ದೇವದಾಸ್ ಕಾಪಿಕಾಡ್‌ರವರು ರಚಿಸಿ, ನಿರ್ದೇಶಿಸಿದ ‘ಏಲ್ಲಾ ಗ್ಯಾರಂಟಿ ಅತ್ತ್..! ಈ ವರ್ಷದ ಹೊಸ ತುಳು ಹಾಸ್ಯ ನಾಟಕ ನಡೆಯಲಿರುವುದು.
ತಾ: 07.09.2024 ರಂದು ಬೆಳಿಗ್ಗೆ 7.00 ಗಂಟೆಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿಗಳು, ದೇರೆಬೈಲ್ ಇವರ ಪೌರೋಹಿತ್ಯದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನೆ ನಡೆಯಲಿರುವುದು, ಶ್ರೀಮತಿ ಸಪ್ನ ಮತ್ತು ಶ್ರೀ ದೇವರಾಜ್
ಅಂಗಡಿಮಾರು ಹಾಗೂ ಶ್ರೀಮತಿ ವನಿತಾ ಜಿ.ಶೆಟ್ಟಿ ಮತ್ತು ಜೆ. ಗಣೇಶ್ ಶೆಟ್ಟಿ ಇವರು ನಂದಾದೀಪ ಬೆಳಗಿಸಲಿರುವರು. ಬೆಳಿಗ್ಗೆ ಗಂಟೆ 9.00ಕ್ಕೆ ಪ್ರತಿಷ್ಠಾಪನಾ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೃಷ್ಣ ಜೆ. ಪಾಲೆಮಾರ್, (ಮಾಜಿ ಸಚಿವರು, ಕರ್ನಾಟಕ ಸರಕಾರ) ಇವರು ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಪ್ರದೀಪ ಕುಮಾರ್ ಕಲ್ಕೂರ, ಶ್ರೀ ದಿನೇಶ್ ಆಳ್ವ ಮೊದಲಾದ ಗಣ್ಯರು ಭಾಗವಹಿಸಲಿರುವರು.
ಬೆಳಿಗ್ಗೆ 9.30 ಗಂಟೆಗೆ ಹಸಿರು ತೆನೆ ವಿತರಣೆ, ನಂತರ ಭಜನಾ ಕಾರ್ಯಕ್ರಮ, ಮಧ್ಯಾಹ್ನದ ಮಹಾಪೂಜೆಯ ನಂತರ ಮಧ್ಯಾಹ್ನ 2.00 ಗಂಟೆಗೆ ‘ಶ್ರೀ ಭೋಜರಾಜ್ ವಾಮಂಜೂರು ಹಾಗೂ ಅರವಿಂದ ಬೋಳಾರ್ ಅವರ ಅಭಿನಯದಲ್ಲಿ ತಿರುಮಲೆತ ತಿಮ್ಮಪ್ಪೆ’ ಎಂಬ ತುಳು ಯಕ್ಷಗಾನ ಹಾಗೂ ಇನ್ನಿತರ ಸಾಂಸ್ಕತಿಕ ಕಾರ್ಯಕ್ರಮಗಳು