October 21, 2025
WhatsApp Image 2024-09-04 at 9.21.22 AM

ಪುತ್ತೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಪುತ್ತೂರು ನ್ಯಾಯಾಲಯ ದಂಡ ವಿಧಿಸಿದೆ. ಉಡುಪಿ ಸಂತೆಕಟ್ಟೆ ಗೋಪಾಲಪುರ ನಿವಾಸಿ ಅನಿಲ್‌ ರಾಜ್ ಲೂವಿಸ್ ಶಿಕ್ಷೆಗೆ ಒಳಗಾದವರು. ಪುತ್ತೂರಿನ ಫ್ರಾನ್ಸಿಸ್ ಡಿ’ಸೋಜಾ ದೂರು ನೀಡಿದವರು. ತನ್ನಿಂದ ವೈಯುಕ್ತಿಕ ಸಾಲ ಪಡೆದು, ಅದಕ್ಕೆ ಚೆಕ್ ನೀಡಿದ್ದು, ಚೆಕ್ ನಗದೀಕರಣಕ್ಕೆ ಬ್ಯಾಂಕ್‌ಗೆ ಹಾಕಿದಾಗ ಚೆಕ್ ಬೌನ್ಸ್ ಆಗಿದ್ದು, ಈ ಬಗ್ಗೆ ಅನಿಲ್‌ರಾಜ್ ಲೂವಿಸ್ ವಿರುದ್ದ ಪುತ್ತೂರು ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಚೆಕ್ ಮೊತ್ತದ ದಂಡ ಮತ್ತು ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

About The Author

Leave a Reply