ವಾಹನಗಳಿಗೆ HSRP ಅಳವಡಿಕೆಗೆ ಸೆ.15 ಡೆಡ್‌ಲೈನ್..! ಇನ್ನಿಲ್ಲ ಲಾಸ್ಟ್‌ ಚಾನ್ಸ್

ವಾಹನ ಸವಾರರು ಈಗಾಗಲೇ ತಮ್ಮ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿನ ಮಾಡಿಕೊಳ್ಳಬೇಕೆಂದು ಈಗಾಗಲೇ ಸಾರಿಗೆ ಇಲಾಖೆ ಸೂಚನೆ ನೀಡಿತ್ತು. ಹಲವು ಬಾರಿ ಗಡುವು ಕೂಡಾ ನೀಡಿತ್ತು. ಆದರೆ ಈ ಬಾರಿ ಸಾರಿಗೆ ಇಲಾಖೆ ವಾಹನ ಸವಾರರಿಗೆ ಮತ್ತೊಮ್ಮೆ ಬಿಗ್‌ ರಿಲೀಫ್‌ ನೀಡುವ ಲೆಕ್ಕಾಚಾರದಲ್ಲಿ ಇಲಾಖೆ ಇಲ್ಲ. ಸೆಪ್ಟಂಬರ್ 15 ರೊಳಗೆ ಹೆಚ್‌ಎಸ್‌ಆರ್‌ಪಿ ನಂಬರ್‌ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ವಾಹನ ಸವಾರರಿಗೆ ಖಡಕ್‌ ಸೂಚನೆಯನ್ನು ನೀಡಿದೆ.

ಸೆ.15 ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಲು ಡೆಡ್‌ಲೈನ್‌ ಆಗಿದೆ. ಇನ್ಮುಂದೆ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಕೇವಲ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ ಅಳವಡಿಕೆಗೆ ಕೇವಲ ಐದು ದಿನ ಬಾಕಿ ಉಳಿದಿದೆ.

2019 ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ವಾಹನಕ್ಕೆ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಕಡ್ಡಾಯ ಆಗಿದೆ. ನಾಲ್ಕು ಬಾರಿ ಗಡುವು ನೀಡಿದ್ರೂ ಹೆಚ್ಎಸ್ಆರ್​ಪಿ ಆಳವಡಿಸದ ವಾಹನ ಸವಾರರಿಗೆ ದಂಡದ ಬಿಸಿ ಮುಟ್ಟಲಿದೆ.

ಇಲ್ಲಿಯವರಿಗೆ ಕೇವಲ 50 ಲಕ್ಷ ವಾಹನ ಸವಾರರು ಮಾತ್ರ  ಹೆಚ್ಎಸ್ಆರ್​ಪಿ ಆಳವಡಿಕೆ ಮಾಡಿಕೊಂಡಿದ್ದಾರೆ. ಇನ್ನೂ 1.4 ಕೋಟಿ ವಾಹನ ಸವಾರರು ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕಿದೆ. ಈಗಾಗಲೇ ಮತ್ತೆ ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಗಡುವು ವಿಸ್ತರಣೆ ಮಾಡೋದಿಲ್ಲ ಎಂದು ಸಾರಿಗೆ ಇಲಾಖೆ ಹೇಳಿದೆ. ಮೊದಲ ಬಾರಿಗೆ 500 ರೂಪಾಯಿ ದಂಡ, ಎರಡನೇ ಬಾರಿ ಸಿಕ್ಕಿಬಿದ್ರೆ 1000 ದಂಡ ಹಾಕಲು ಸಾರಿಗೆ ಇಲಾಖೆ ಪ್ಲಾನ್ ಮಾಡಿದೆ.

Leave a Reply