ವಿಟ್ಲ ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ದಿನಾಂಕ.10..09.2024 ಮಂಗಳವಾರ ವಿಟ್ಲ ಪಡ್ನೂರು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಕೆ ಸುಭಾಷ್ ಚಂದ್ರ ಶೆಟ್ಟಿ ಯವರು ವಹಿಸಿದ್ದರು. ಸಂಘವು ರೂ 314.09.49836.40 ವ್ಯವಹಾರ ನಡೆಸಿ ರೂ 1350450 ನಿವ್ವಳ ಲಾಭಗಳಿಸಿದೆ ಸಂಘದ ಸದಸ್ಯರಿಗೆ ಲಾಭಾಂಶದಿಂದ 11.50% ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ ಸುಭಾಷ್ ಚಂದ್ರ ಶೆಟ್ಟಿ ತಿಳಿಸಿದರು
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವರದಿ ವರ್ಷಕ್ಕೆ ಸಂಘವು 4231 ಮಂದಿ “A” ತರಗತಿ ಸದಸ್ಯರನ್ನ ಹೊಂದಿದ್ದು ರೂ 5,24,19716 ಪಾಲು ಬಂಡವಾಳವನ್ನು ಹೊಂದಿ ಲೆಕ್ಕಪರಿಶೋಧನೆಯಲ್ಲಿ ಸಂಘ ವು “A” ಶ್ರೇಣಿಯನ್ನು ಪಡೆದುಕೊಂಡಿರುತ್ತದೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಂಧ್ಯಾ ಯು ಶೆಟ್ಟಿ ಯವರು ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು.
ಸದಸ್ಯರು ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ವತಿಯಿಂದ ಶಿಕ್ಷಕಿ ಶ್ರೀಮತಿ ಚಿತ್ರಕಲಾ ಮತ್ತು ಪಶು ವೈದ್ಯಾಧಿಕಾರಿ ಮಂದರ ಜೈನ್ ಹಾಗು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ತಲಾ 3 ವರು ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮತ್ತು ಸಂಘದ ಸದಸ್ಯರಾದ ವಸಂತ ನಾಯ್ಕ್, ರಮೇಶ್ ಶೆಟ್ಟಿ ಹರಿಣಾಕ್ಷ, ಎಲಿಯಾಸ್ ಡಿಸೋಜಾ ರುಕ್ಮ ರವರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಹಾಗೂ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಹಾಗೂ ಮಾದಕಟ್ಟೆ ಹಿರಿಯ ಪ್ರಾಥಮಿಕ ಶಾಲೆಗೆ ಸಹಾಯಧನದ ಚೆಕ್ ವಿತರಿಸಲಾಯಿತು, ಸಂಘದ ಹಿರಿಯ ಸದಸ್ಯರು ಮಾಜಿ ನಿರ್ದೇಶಕರಾದ ಗೋಪಾಲ ಕೃಷ್ಣ ಭಟ್ ಬೋಳ್ಳೆಚಾರ್ ಪ್ರಾರ್ಥನೆ ಮಾಡಿದರು ಅಧ್ಯಕ್ಷರಾದ ಕುಳಾಲ್ ಸುಭಾಷ್ ಚಂದ್ರ ಶೆಟ್ಟಿ ಸ್ವಾಗತಿಸಿ, ಸಂಘದ ಸಿಬ್ಬಂದಿ ಸುರೇಶ್ ಪಿ ರವರು ವಂದಿಸಿದರು. ಮತ್ತುಸಂಘದ ಸಿಬ್ಬಂದಿ ಪದ್ಮಾನಾಭ ರವರು ಕಾರ್ಯ ಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು ಎಂ ಭಾಲಕೃಷ್ಣ ರೈ,ಎಲ್ಲ ನಿರ್ದೇಶಕರು, ಸಿಬ್ಬಂದಿಗಳು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು