
ಪುತ್ತೂರು: ಕುರಿಯ ಗ್ರಾಮದ ಅಜಲಾಡಿ ಜಂಕ್ಷನ್ ಬಳಿ ಇಂದು ಲೋಕ ಪ್ರವಾದಿ ಮಹಮ್ಮದ್ ಪೈಗಂಬರ್ ಸ.ಅ ಅವರ ಜನ್ಮದಿನದ ಪ್ರಯುಕ್ತ ಬೃಹತ್ ಈದ್ ಮಿಲಾದ್ ಕಾರ್ಯಕ್ರಮ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು ಬದ್ರಿಯಾ ಜುಮ್ಮಾ ಮಸೀದಿ ಅಜ್ಜಿಕಟ್ಟೆಯ ಮದ್ರಸ ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ಹಾಗೂ ದಫ್ ಪ್ರದರ್ಶನ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು ಬದ್ರಿಯಾ ಜುಮ್ಮಾ ಮಸೀದಿ ಅಜ್ಜಿಕಟ್ಟೆಯಿಂದ ಆರಂಭಗೊಂಡ ಮೆರವಣಿಗೆಯು ಕುರಿಯ ಅಜಲಾಡಿ ಜಂಕ್ಷನ್ ಬಳಿ ತಲುಪಿತು.



ಅಜಲಾಡಿ ಜಂಕ್ಷನ್ ಬಳಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮವನ್ನು ವೀಕ್ಷಿಸಲು ಹಲವಾರು ಹಿರಿಯರು ಕಿರಿಯರು ಯುವಕರು ಮಹಿಳೆಯರು ಸೇರಿದ್ದರು ಅಜಲಾಡಿ ಈದ್ ಮಿಲಾದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ರಫ್ ಕುರಿಯ ಹಾಗೂ ಕಾರ್ಯದರ್ಶಿ ಸವಾದ್ ಕುರಿಯ ವಹಿಸಿದ್ದರು ಕಾರ್ಯಕ್ರಮದಲ್ಲಿ ಅಜ್ಜಿಕಟ್ಪೆ ಮಸೀದಿಯ ಅದ್ಯಕ್ಷರಾದ ಅಬೂಬಕ್ಕರ್ ಮುಲಾರ್ ಹಾಗೂ ಕಾರ್ಯದರ್ಶಿ ನಝೀರ್ ಅರ್ಷದಿ ಮುಂತಾದ ಜಮಾತ್ ಪ್ರಮುಖರು ಭಾಗವಹಿಸಿದರು ಅಜ್ಜಿಕಟ್ಟೆ ಮಸೀದಿಯ ಖತಿಬರಾದ ಇಸಾಕ್ ದಾರಿಮಿಯವರು ದುವಾ ನೆರೆವೆರಿಸಿದರು , ಕಾರ್ಯಕ್ರಮದಲ್ಲಿ ಅಜ್ಜಿಕಟ್ಪೆ ಮಸೀದಿಯ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನ ನಡೆಯಿತು ಕಾರ್ಯಕ್ರಮದಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಈದ್ ಮಿಲಾದ್ ಸಮೀತಿಯ ಗೌರವಾಧ್ಯಕ್ಷರಾದ ಯಾಕುಬ್ ಕುರಿಯ ಹಾಗೂ ಸೂಫಿ ಕುರಿಯ ಹಾಗೂ ಕಲಂದರ್ ಮುಸ್ತಫಾ (ದಿಲ್ ದಾರ್) ಹಾಗೂ ಅಲ್ ನೂರು ಯೂತ್ ಫೆಡರೇಷನ್ ನ ಪದಾಧಿಕಾರಿಗಳು ಹಾಗೂ ಊರಿನ ಯುವಕರು,ಮಹಿಳೆಯರು ಹಾಗೂ ಹಿರಿಯರು ಭಾಗವಹಿಸಿದರು ಕಾರ್ಯಕ್ರಮದ ಕೊನೆಯಲ್ಲಿ ಈದ್ ಮಿಲಾದ್ ಸಮೀತಿ ವತಿಯಿಂದ ಹಾಗೂ ಅಬ್ದುಲ್ ಕುಙ್ಙಿ ಪರಂಕಿಲ್ ಇವರ ವತಿಯಿಂದ ಸಿಹಿ ತಿಂಡಿ ವಿತರಣೆ ಹಾಗೂ ಅಬ್ದುಲ್ ಕುಙ್ಙಿ ಕುರಿಯ (ಪಕ್ರುಚ್ಚ) ಇವರಿಂದ ತಂಪು ಪಾನೀಯ ಹಾಗೂ ಫೈಝಲ್ ಕುರಿಯ ಕಣಚೂರು ಇವರ ವತಿಯಿಂದ ಐಸ್ ಕ್ರೀಮ್ ವಿತರಣೆ ನಡೆಯಿತು ಕಾರ್ಯಕ್ರಮಕ್ಕೆ ಸಂಪ್ಯ ಗ್ರಾಮಾಂತರ ಠಾಣೆಯ ಕುರಿಯ ಬೀಟ್ ಪೋಲಿಸ್ ರು ಸಹಕರಿಸಿದರು..