October 21, 2025
WhatsApp Image 2024-09-16 at 3.09.15 PM

ಮಂಗಳೂರು : ದಕ್ಷಿಣ ಕನ್ನಡ ‌ಜಿಲ್ಲೆಯ ಹಲವು ಕಡೆಗಳಲ್ಲಿ ಇಂದು ಬೆಳಗ್ಗೆ ಎಂದಿನಂತೆ ಈದ್ ಮೆರವಣಿಗೆಯೂ ಶಾಂತಿಯುತವಾಗಿ ನಡೆದಿದೆ, ಪೊಲೀಸರು ಹೆಚ್ಚುವರಿ ಪಡೆಗಳನ್ನು ಕರೆಸಿ ಬಂದೋಬಸ್ತ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಸಿ ರೋಡ್ ನಲ್ಲಿ ಸಾವಿರಾರು ಹಿಂದು ಸಂಘಟನೆ ಕಾರ್ಯಕರ್ತರು ಸೇರಿದ್ದಾರೆ.

ಅಲ್ಲದೆ, ಶರಣ್ ಪಂಪೈಲ್ ಮತ್ತು ಇತರ ಹಿಂದು ಸಂಘಟನೆ ನಾಯಕರು ಆಗಮಿಸಿದ್ದು, ಪೊಲೀಸರು ಹಾಕಿದ್ದ ತಡೆಬೇಲಿಯನ್ನು ತಳ್ಳಿಕೊಂಡು ಬಂದು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಶರಣ್ ಅವರನ್ನು ಮೇಲೆತ್ತಿ ಕೇಸರಿ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಆನಂತರ, ಎಸ್ಪಿ ಯತೀಶ್ ಕುಮಾರ್ ಹಿಂದು ಸಂಘಟನೆ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದು, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

About The Author

Leave a Reply