
ರಾಮನಗರ: ದಲಿತ ಸಮುದಾಯಕ್ಕೆ ಸೇರಿದ ಗುತ್ತಿಗೆದಾರನಿಗೆ ಜಾತಿನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಜೈಲು ಸೇರಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಹನಿಟ್ರ್ಯಾಪ್‌ಗೆ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಇದು ಮುನಿರತ್ನ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮುನಿರತ್ನ ವಿರುದ್ಧ ರಾಮನಗರದ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.



ನನ್ನ ಮೇಲೆ ಅತ್ಯಾಚಾರ ಆಗಿದೆ. ಕಗ್ಗಲೀಪುರದ ರೆಸಾರ್ಟ್‌ನಲ್ಲಿ ಈ ಕೃತ್ಯ ನಡೆದಿದೆ ಎಂದು ಮಹಿಳೆಯೊಬ್ಬರು ಆರೋಪಿಸಿ ಮುನಿರತ್ನ ವಿರುದ್ಧ ದೂರು ನೀಡಿದ್ದಾರೆ. ಮುನಿರತ್ನ ಸೇರಿ ಒಟ್ಟು 7 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅಂತೆಯೇ ಪೊಲೀಸರು ಬಿಎನ್ಎಸ್ 354ಎ, 354 ಸಿ, 376, 506, 504, 120(B), 149, 384, 406, 308 ಅಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. 7 ಮಂದಿ ವಿರುದ್ಧ FIR! ಎ1 ಮುನಿರತ್ನ ನಾಯ್ಡು ಎ2 ವಿಜಯ್ ಕುಮಾರ್ ಎ3 ಸುಧಾಕರ್ ಎ4 ಕಿರಣ್ ಕುಮಾರ್ ಎ5 ಲೋಹಿತ್ ಗೌಡ ಎ6 ಮಂಜುನಾಥ್ ಎ7 ಲೋಕಿ