ಪುತ್ತೂರು: ಪುತ್ತೂರು ತಾಲೂಕಿನ ಕುರಿಯ ಅಜಲಾಡಿ ಜಂಕ್ಷನ್ ಬಳಿ ದಿನಾಂಕ 17/09/2024 ರಂದು ಕುರಿಯ ಈದ್ ಮಿಲಾದ್ ಸಮೀತಿ ವತಿಯಿಂದ 3 ಮದ್ರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ಹಾಗೂ ಹುಬ್ಬುರ್ರಸೂಲ್ ಪ್ರಭಾಷಣವು ನಡೆಯಿತು ಪ್ರಥಮ ಸ್ಥಾನವನ್ನು ಬದ್ರಿಯಾ ಜುಮ್ಮಾ ಮಸೀದಿ ಅಜ್ಜಿಕಟ್ಟೆಯ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು, ದ್ವಿತೀಯ ಸ್ಥಾನವನ್ನು ಮಸ್ಜಿದ್ ಲ್ ರಹ್ಮಾ ಪಂಜಳದ ವಿದ್ಯಾರ್ಥಿಗಳು ಪಡೆದರು ತೃತೀಯ ಸ್ಥಾನವನ್ನು ಬದ್ರಿಯಾ ಮಸೀದಿ ಬಳ್ಳಮಜಲು ಕುರಿಯ ಇದರ ವಿದ್ಯಾರ್ಥಿಗಳು ಪಡೆದುಕೊಂಡರು..ಕುರಿಯ ಅಜಲಾಡಿಯಲ್ಲಿ ಇಂತಹ ಅದ್ದೂರಿ ಕಾರ್ಯಕ್ರಮವು ಇದೇ ಮೊದಲ ಬಾರಿಗೆ ನಡೆದಿರುವುದರಿಂದ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈದ್ ಮಿಲಾದ್ ಸಮೀತಿ ಅಧ್ಯಕ್ಷ ಅಶ್ರಫ್ ಕುರಿಯ ವಹಿಸಿದ್ದರು ಕಾರ್ಯಕ್ರಮದ ರೂವಾರಿಯನ್ನು ಈದ್ ಮಿಲಾದ್ ಸಮೀತಿ ಪ್ರಧಾನ ಕಾರ್ಯದರ್ಶಿ ಸವಾದ್ ಕುರಿಯ ವಹಿಸಿದ್ದರು, ಉದ್ಘಾಟನೆಯ ನೇತೃತ್ವವನ್ನು ಶರೀಫ್ ದಾರಿಮಿ ಪಂಜಳ ನೆರವೇರಿಸಿದರು.
ಬಹು ಅಲ್ ಹಾದಿ ಯಹ್ಯಾ ತಂಙಳ್ ಪೋಳ್ಯ ರವರು ದುವಾ ನೆರೆವೆರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..ಸ್ವಾಗತ ಭಾಷಣವನ್ನು MBJM ಅಜ್ಜಿಕಟ್ಟೆ ಇದರ ಕಾರ್ಯದರ್ಶಿ ನಝೀರ್ ಅರ್ಷದಿ ಉಸ್ತಾದ್ ನೆರವೇರಿಸಿದರು, ಕಿರಾಹತ್ ನ್ನು ಹಸೈನ್ A.R ವಿದ್ಯಾರ್ಥಿ ನೂರುಲ್ ಹುದಾ ಮಾಡನ್ನೂರು ರವರು ವಹಿಸಿದ್ದು ಹುಬ್ಬು ರಸೂಲ್ ಪ್ರಭಾಷಣವನ್ನು ಮಹಮ್ಮದ್ ನಜೀಬ್ ಅನ್ವರ್ ವಿದ್ಯಾರ್ಥಿ ಅಲ್ ಮದೀನತುಲ್ ಮುನವ್ವರ ಮೂಡಡ್ಕ, ಹಾಗೂ ಹುಸೈನ್ A.R ವಿದ್ಯಾರ್ಥಿ ನೂರುಲ್ ಹುದಾ ಮಾಡನ್ನೂರು ರವರು ಪ್ರಭಾಷಣ ಗೈದರು, ಮುಖ್ಯ ಪ್ರಭಾಷಣವನ್ನು ಇಸಾಕ್ ದಾರಿಮಿ ಖತಿಬರು MBJM ಅಜ್ಜಿಕಟ್ಟೆಯವರು ನಡೆಸಿದರು, ಕಾರ್ಯಕ್ರಮದ ಕೊನೆಯಲ್ಲಿ ಅಹಮ್ಮದ್ ಅಲ್ ಮದೀನಿ ಕುರಿಯ ಇವರು ಆಸಂಶ ಭಾಷಣವನ್ನು ಮಾಡಿದರು,ವೇದಿಕೆಯಲ್ಲಿ ಅಬ್ಬಾಸ್ ಮುಸ್ಲಿಯಾರ್ ಅಧ್ಯಾಪಕರು ಬಳ್ಳಮಜಲು ಕುರಿಯ ಮದ್ರಸಾ, ಅಬ್ದುಲ್ ಖಾದರ್ ಮುಸ್ಲಿಯಾರ್ ಸದರ್ ಮುಹಲ್ಲಿಂ ಅಜ್ಜಿಕಟ್ಟೆ, ಖಾಲಿದ್ ಮುಸ್ಲಿಯಾರ್ ಸಹ ಅಧ್ಯಾಪಕರು ಅಜ್ಜಿಕಟ್ಟೆ, ಮುಖ್ಯ ಅತಿಥಿಗಳಾಗಿ ಉಮ್ಮರ್ ಹಾಜಿ ಪಟ್ಟೆ, ಇಬ್ರಾಹಿಂ ಮುಲಾರ್, ಅಬೂಬಕ್ಕರ್ ಮುಲಾರ್,ಶಂಶುದ್ದಿನ್ ಸಾಲ್ಮರ, ಅಯ್ಯೂಬ್ ಗಡಾಜೆ,ಅರ್ಫಾಝ್ ಕುರಿಯ, ಮುಸ್ತಫಾ ಮುಲಾರ್, ಯಾಕುಬ್ ಕುರಿಯ ಗ್ರಾಮ ಪಂಚಾಯತ್ ಸದಸ್ಯರು, ಅಬ್ದುಲ್ಲಾ ಕುಙ್ಙಿ ಪಟ್ಟೆ, ಖಲಂದರ್ ಮುಸ್ತಫಾ ದಿಲ್ ದಾರ್, ಮುಸ್ತಫಾ ಅಜ್ಜಿಕಟ್ಟೆ, ರಫೀಕ್ ಕುರಿಯ, ಫೈಝಲ್ ಕಣಚೂರು, ಉಸ್ಮಾನ್ ಅಜ್ಜಿಕಟ್ಟೆ, ಇಬ್ರಾಹಿಂ ಹಾಜಿ, ಅಬ್ದುಲ್ಲಾ ಹಾಜಿ, ಅಬ್ದುಲ್ಲಾ ಕುಙ್ಙಿ ಕುರಿಯ(ಆಶಿಕ್ ಶಾಮಿಯಾನ), ಸೂಫಿ ಕುರಿಯ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ 2023 ನೇ ಸಾಲಿನ ಈದ್ ಮಿಲಾದ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಈದ್ ಮಿಲಾದ್ ಸಮೀತಿ ಅಧ್ಯಕ್ಷರಾದ ಖಲಂದರ್ ಮುಸ್ತಫಾ ದಿಲ್ ದಾರ್, ಹಾಗೂ ಪ್ರಧಾನ ಕಾರ್ಯದರ್ಶಿ ಸಮೀರ್ ಶಾಝ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು…ಅದೇ ರೀತಿ ಯುವಕರಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತಿದ್ದ ಊರಿನ ಪ್ರಮುಖ ವ್ಯಕ್ತಿ ಸೂಫಿ ಕುರಿಯ ಹಾಗೂ ಅಜಲಾಡಿ ಕುರಿಯ ಪರಿಸರದಲ್ಲಿ ಚಿರಪರಿಚಿತರಾಗಿರುವ ಅತ್ಯುತ್ತಮ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಲೋಕೇಶ್ ಕುರಿಯ ಇವರನ್ನು ಕೂಡ ಕಾರ್ಯಕ್ರಮದಲ್ಲಿ ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು… ಕಾರ್ಯಕ್ರಮದಲ್ಲಿ 3 ಮದ್ರಸದ ವಿದ್ಯಾರ್ಥಿಗಳು ಬಹಳ ಅಚ್ಚುಕಟ್ಟಾಗಿ ತಮ್ಮ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರು ಕಾರ್ಯಕ್ರಮದಲ್ಲಿ ಅಲ್ ನೂರು ಯೂತ್ ಫೆಡರೇಷನ್ ಕುರಿಯ ಇದರ ಪದಾಧಿಕಾರಿಗಳು ಹಾಗೂ ಈದ್ ಮಿಲಾದ್ ಸಮೀತಿ ಪದಾಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ..ಇದೇ ಸಂದರ್ಭದಲ್ಲಿ ಅಲ್ ನೂರು ಯೂತ್ ಫೆಡರೇಷನ್ ಕುರಿಯ ಇದರ ವತಿಯಿಂದ ಅಜ್ಜಿಕಟ್ಟೆ ಬದ್ರಿಯಾ ಜುಮ್ಮಾ ಮಸೀದಿಯ ಕಬರ್ ಸ್ಥಾನಕ್ಕೆ ಶೀಘ್ರದಲ್ಲೇ ಟೆಂಟ್ ನೀಡುವುದಾಗಿ ಘೋಷಿಸಿದರು.. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಹಿರಿಯರು ಯುವಕರು ಮಹಿಳೆಯರು ಸೇರಿದಂತೆ ಹಲವಾರು ಉಪಸ್ಥಿತರಿದ್ದರು ಕಾರ್ಯಕ್ರಮದ ಕೊನೆಯಲ್ಲಿ ಸಿರಣಿ ವಿತರಣೆ ನಡೆಯಿತು.ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಎಲ್ಲಾ ದೀನಿ ಪ್ರೇಮಿಗಳಿಗೆ ಈದ್ ಮಿಲಾದ್ ಸಮೀತಿಯು ಧನ್ಯವಾದಗಳು ತಿಳಿಸಿದೆ…