ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!

ಸುಳ್ಯ: ಕಳೆದ ಕೆಲವು ದಿನಗಳಿಂದ ಕೆಟ್ಟು ನಿಲ್ಲಿಸಿದ್ದ ಓಮ್ನಿ ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಸುಳ್ಯದ ಪರಿವಾರಕಾನ ಬಳಿ ನಡೆದಿದೆ. ಪರಿವಾರಕಾನದ ಸ್ನೇಹ ಶಾಲೆಗೆ ಹೋಗುವ ರಸ್ತೆಯ ಬದಿ ಸ್ವಲ್ಪ ಸಮಯದಿಂದ ಈ ಓಮ್ನಿ ಕಾರು ಕೆಟ್ಟು ನಿಂತಿತ್ತು. ಸೋಮವಾರ ಸಂಜೆ ಕೊಳೆತ ವಾಸನೆ ಬರುತ್ತಿದ್ದ ವೇಳೆ ಸ್ಥಳೀಯರು ಪರಿಶೀಲನೆ ನಡೆಸಿದ್ದಾಗ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ವಾಹನದ ಒಳಗೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave a Reply