
ಪುತ್ತೂರು: ಬ್ಯಾಂಕ್ ಸಾಲ ಕೇಳಲು ಹೋದ ಮ್ಯಾನೇಜರ್ ಗೆ ಪಿಸ್ತೂಲು ತೋರಿಸಿ ಬೆದರಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.



ಬಲ್ನಾಡು ಉಜುರುಪಾದೆ ನಿವಾಸಿ ಅಖಿಲೇಶ್ ಪಿಸ್ತೂಲು ತೋರಿಸಿ ಬೆದರಿಸಿದ ಆರೋಪಿ ಯಾಗಿದ್ದು, ಎಸ್.ಬಿ.ಐ ಬ್ಯಾಂಕ್ ನಿಂದ 2 ಕೋಟಿ ಸಾಲ ಪಡೆದಿದ್ದ ಅಖಿಲೇಶ್ ಪತ್ನಿ ಕೀರ್ತಿ ಅಖಿಲೇಶ್ ಸಾಲ ಮರುಪಾವತಿಸದೆ NPA ಆಗಿದ್ದರು.
ಹಲವು ಬಾರಿ ವಕೀಲರ ಮೂಲಕ ಬ್ಯಾಂಕ್ ಮ್ಯಾನೇಜರ್ ನೋಟೀಸ್ ಕಳಿಸಿದ್ದರು. ಈ ಸಂಬಂಧ ಮೇಲಾಧಿಕಾರಿಗಳ ಆದೇಶದಂತೆ ಅಖಿಲೇಶ್ ಮನೆಗೆ ಬ್ಯಾಂಕ್ ಮ್ಯಾನೇಜರ್ ತೆರಳಿಸದ್ದಾರೆ. ಮನೆಗೆ ಬಂದ ಹಿನ್ನಲೆಯಲ್ಲಿ ಬ್ಯಾಂಕ್ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿ ಮನೆಯಲ್ಲಿದ್ದ ಪಿಸ್ತೂಲ್ ನಿಂದ ಕೊಲೆ ಮಾಡುವ ಬೆದರಿಕೆ ಅಖಿಲೇಶ್ ಹಾಕಿದ್ದಾರೆ. ಈ ಬಗ್ಗೆಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.