October 12, 2025
WhatsApp Image 2024-11-01 at 9.37.58 AM

ಸುರತ್ಕಲ್: ಮಂಗಳೂರು ಹೊರವಲಯದ ಸುರತ್ಕಲಿನಲ್ಲಿ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.  ಕಾಂಗ್ರೆಸ್ ಮುಖಂಡ ಕೃಷ್ಣಾಪುರ ನಿವಾಸಿ ಮಂಗಳೂರು ಬಾವ ಅವರ ಪುತ್ರ ಮುಹಮ್ಮದ್ ಆಸಿಫ್ (24) ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ.

ಗುರುವಾರ ಮನೆಯಲ್ಲಿದ್ದ ವೇಳೆ ಏಕಾಏಕಿ ಎದೆನೋವು, ಕೈಕಾಲು ನೋವು, ಬೆನ್ನು ನೋವು ಎಂದು ತಿಳಿಸಿದ್ದರು. ಬಳಿಕ ಎದೆನೋವು ಹೆಚ್ಚಾದ ಪರಿಣಾಮ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಮಂಗಳೂರು ಬಾವ ಅವರ 4 ಗಂಡು ಮತ್ತು 2 ಹೆಣ್ಣು ಮಕ್ಕಳ ಪೈಕಿ ಮುಹಮ್ಮದ್ ಆಸಿಫ್ ಕೊನೆಯವರಾಗಿದ್ದರು. ಅವರು ತಂದೆ, ತಾಯಿ, ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಕೃಷ್ಣಾಪುರ 7ನೇ ಬ್ಲಾಕ್ ನ ಈದ್ಗಾ ಖಬಸ್ತಾನದಲ್ಲಿ ನಡೆಯಿತು‌. ಸಂತಾಪ: ಕಾಂಗ್ರೆಸ್ ಮುಖಂಡ ಮಂಗಳೂರು ಬಾವ ಅವರ ಪುತ್ರ ಮುಹಮ್ಮದ್ ಆಸಿಫ್ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಪ್ರಧಾನ ಕಾರ್ಯದರ್ಶಿಗಳಾದ ರೆಹಮಾನ್ ಖಾನ್ ಕುಂಜತ್ತಬೈಲ್, ರಾಜೇಶ್ ಕುಳಾಯಿ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

About The Author

Leave a Reply