August 30, 2025
WhatsApp Image 2024-11-01 at 1.11.39 PM

ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಅವಹೇಳನ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದರು.

ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಅವಹೇಳನ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕನ್ನಡ ಕನ್ನಡಿಗರ ಹೃದಯ ಭಾಷೆಯಷ್ಟೇ ಅಲ್ಲ, ಜ್ಞಾನ – ವಿಜ್ಞಾನ – ತಂತ್ರಜ್ಞಾನದ ಭಾಷೆಯಾಗಿಯೂ ಜಾಗತಿಕ ಹೆಮ್ಮೆಯಾಗಬೇಕು ಎನ್ನುವ ಸಂಕಲ್ಪ ನಮ್ಮದು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎನ್ನುವ ದೀಕ್ಷೆಯು ಸಿರಿಗನ್ನಡವು ಜಗದೋದ್ಧಾರಕ್ಕೆ ಎನ್ನುವ ಹಂಬಲದ ಮೂಲಕ ಮತ್ತಷ್ಟು ಮಗದಷ್ಟು ಕಸುವು ಪಡೆದು, ವಿಶ್ವ ವ್ಯಾಪಿಯಾಗಲಿ. ಹೆತ್ತ ತಾಯಿಗೆ ಕೊಟ್ಟಷ್ಟೇ ಗೌರವವನ್ನು ಕನ್ನಡಕ್ಕೂ ನೀಡೋಣ. ನಾಡಭಾಷೆ ಕನ್ನಡ ಆಡು ಭಾಷೆ, ಅನ್ನದ ಭಾಷೆಯಾಗಲಿ. ನಿತ್ಯ ಬದುಕಿನಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸೋಣ, ಆ ಮೂಲಕ ಕನ್ನಡವನ್ನು ಬೆಳೆಸೋಣ. ಎಂದರು.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡ, ಕನ್ನಡಿಗರ ಅವಹೇಳನ ಮಾಡುವ ಘಟನೆಗಳು ವರದಿಯಾಗುತ್ತಿದೆ. ಇನ್ನುಮುಂದೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಅವಹೇಳನ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

About The Author

Leave a Reply