October 13, 2025
WhatsApp Image 2024-12-03 at 9.22.52 AM

ಕಡಬ : ನವೆಂಬರ್ 27 ರಂದು ನಾಪತ್ತೆಯಾಗಿದ್ದ ಬಿಳಿನೆಲೆಯ ಸಂದೀಪ್ ಎಂಬ ಯುವಕನ ಮೃತ ದೇಹ ಪತ್ತೆಯಾಗಿದೆ. ನಾಪತ್ತೆಯಾಗಿ ವಾರಗಳ ಬಳಿಕ ಗ್ರಾಮಸ್ಥರ ಒತ್ತಡಕ್ಕೆ ಮಣಿದ ಪೊಲೀಸರು ತನಿಖೆ ಆರಂಭಿಸಿ ಪ್ರಕರಣವನ್ನು ಬೇಧಿಸಿದ್ದಾರೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣದ ದೂರು ಸ್ವೀಕರಿಸಲು ಪೊಲೀಸರು ಮುಂದಾಗಿರಲಿಲ್ಲ. ಬಳಿಕ ರಾತೋರಾತ್ರಿ ಗ್ರಾಮಸ್ಥರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಶಂಕಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು.

ಡಿಸೆಂಬರ್ 2 ರಂದು ಗ್ರಾಮಸ್ಥರ ಜೊತೆ ಠಾಣೆಗೆ ಆಗಮಿಸಿದ ಬಿಜೆಪಿ ನಾಯಕರು ತನಿಕೆಗೆ ಪೊಲೀಸರನ್ನು ಒತ್ತಾಯಿಸಿದ್ದರು. ಶಂಕಿತ ಆರೋಪಿಯಾಗಿದ್ದ ಪ್ರತೀಕ್ ಎಂಬಾತನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಬಳಿಕ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದ ಪೊಲೀಸರು ಸಂದೀಪ್ ಮೃತದೇಹ ಪತ್ತೆ ಹಚ್ಚಿದ್ದಾರೆ.

ಕಡಬ ಸುಬ್ರಹ್ಮಣ್ಯ ರಸ್ತೆಯ ನಾರಡ್ಕ ಎಂಬ ಪ್ರದೇಶದಲ್ಲಿ ಸಂದೀಪ್‌ ಮೃತದೇಹ ಪತ್ತೆಯಾಗಿದೆ. ಸಂದೀಪ್‌ನನ್ನು ಹತ್ಯೆ ಮಾಡಿದ್ದ ಪ್ರತೀಕ್ ಪೆಟ್ರೋಲ್ ಸುರಿದು ಮೃತದೇಹಕ್ಕೆ ಬೆಂಕಿ ಹಚ್ಚಿದ್ದ ಎಂಬುದು ಗೊತ್ತಾಗಿದೆ.

ಮಳೆಯ ನಡುವೆಯೂ ಹತ್ಯೆ ನಡೆದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಇದರಲ್ಲಿ ಇನ್ನೂ ಅನೇಕ ಆರೋಪಿಗಳು ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದೊಂದು ಗಾಂಜಾ ಅಮಲಿನಲ್ಲಿ ಅಥವಾ ಗಾಂಜಾ ವ್ಯವಹಾರದಲ್ಲಿ ನಡೆದ ಕೊಲೆಯಾಗಿರಬಹದು ಎಂದು ಆರೋಪ ಕೇಳಿ ಬಂದಿದೆ.

About The Author

Leave a Reply