February 14, 2026
WhatsApp Image 2024-11-11 at 10.18.20 AM

ಮಂಗಳೂರು : ಮಾರುತಿ 800 ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ನಗರದ ಲೇಡಿಹಿಲ್‌ನ ನಾರಾಯಣಗುರು ವೃತ್ತದ ಬಳಿಯ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ. ಕಾರಿನಲ್ಲಿದ್ದ ಮೂವರು ತಕ್ಷಣವೇ ಕೆಳಕ್ಕಿಳಿದು ಅಪಾಯದಿಂದ ಪಾರಾಗಿದ್ದಾರೆ.

ಮಾರುತಿ 800 ಕಾರು ಬಜಪೆ ಆದ್ಯಪಾಡಿಯ ಪಾರ್ಶ್ವನಾಥ ಎಂಬುವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.

ಅವರು ಪೆಟ್ರೋಲ್ ಹಾಕಿಸಲಿಕ್ಕೆ ಲೇಡಿಹಿಲ್‌ನ ನಾರಾಯಣ ಗುರು ವೃತ್ತದ ಸಮೀಪದ ಪೆಟ್ರೋಲ್ ಬಂಕ್‌ಗೆ ಬರುತ್ತಿದ್ದರು. ಪೆಟ್ರೋಲ್ ಬಂಕ್ ಒಳಗೆ ಪ್ರವೇಶಿಸುವ ಮುನ್ನವೇ ರಸ್ತೆಯಲ್ಲೇ ಶಾರ್ಟ್‌ ಸರ್ಕೀಟ್‌ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

About The Author

Leave a Reply