ಇತ್ತೀಚಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವವರ ಮೇಲೂ ಬೀದಿ ನಾಯಿಗಳು ದಾಳಿ ಮಾಡುತ್ತಿವೆ. ಈ ನಡುವೆ ಆಂಧ್ರಪ್ರದೇಶದಲ್ಲಿ ದುರಂತವೊಂದು ನಡೆದಿದೆ.
ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಜಗ್ಗಯ್ಯಪೇಟೆಯಲ್ಲಿ ಬೀದಿ ನಾಯಿಗಳ ದಾಳಿಗೆ 1 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಎನ್‌ಟಿಆರ್ ಜಿಲ್ಲೆಯ ಪೆನುಗಂಚಿಪ್ರೋಲುವಿನಲ್ಲಿ ತೂಪಾನ್ ಕಾಲೋನಿಯ ಬಳತೋಟಿ ಗೋಪಾಲರಾವ್ ಮತ್ತು ನಾಗಮಣಿ ದಂಪತಿಯ ಏಕೈಕ ಮಗು ಪ್ರೇಮಕುಮಾರ್ (1). ಸೋಮವಾರ ತಾಯಿ ತನ್ನ ಮಗನನ್ನು ಸ್ನಾನಕ್ಕೆಂದು ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದಳು. ಬಾಲಕನನ್ನು ಅಲ್ಲೇ ಬಿಟ್ಟು ಯಾವುದೋ ಕೆಲಸದ ನಿಮಿತ್ತ ಮನೆಯೊಳಗೆ ಹೋದಾಗ ಅಲ್ಲಿಗೆ ಬಂದ ನಾಯಿಗಳು ಏಕಾಏಕಿ ಬಾಲಕನ ಮೇಲೆ ದಾಳಿ ಮಾಡಿವೆ.
ತಾಯಿ ಹೊರಗೆ ಬಂದು ಮಗುವಿಗಾಗಿ ರಸ್ತೆಯಲ್ಲಿ ಓಡಿದಳು. ದೂರದಲ್ಲಿ ನಾಯಿಗಳ ಗುಂಪನ್ನು ಕಂಡ ಸ್ಥಳೀಯರೊಬ್ಬರು ನಾಯಿಗಳನ್ನು ಓಡಿಸಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸ್ವಲ್ಪದರಲ್ಲೇ ಕೊನೆಯುಸಿರೆಳೆದಿದ್ದಾನೆ.