August 30, 2025
WhatsApp Image 2024-11-14 at 2.55.49 PM

ಮಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ರವರ ಹೇಳಿಕೆಗೆ ಸಂಭಂದಿಸಿದಂತೆ ಪುನೀತ್ ಕೆರೆಹಳ್ಳಿ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಸಾರ್ವಜನಿಕವಾಗಿ ಅಲ್ಲಾಹನ ವರ್ಣ ಮತ್ತು ಲಿಂಗದ ಬಗ್ಗೆ ಸವಾಲು ಹಾಕಿದ್ದೂ ಅಲ್ಲದೆ ಧರ್ಮ ನಿಂದನೆ ಮಾಡಿದ್ದು ಖಂಡನೀಯ, ರಾಜಕೀಯ ಪ್ರತಿನಿಧಿಗಳ ಪರಸ್ಪರ ವೈರುಧ್ಯದ ಹೇಳಿಕೆಗಳಿಗೂ ದೇವ ಧರ್ಮಗಳಿಗೂ ಏನು ಸಂಭಂದವಿದೆ?. ಪುನೀತ್ ಕೆರೆಹಳ್ಳಿಗೆ ದೇವನ, ಅಲ್ಲಾಹನ ವರ್ಣ, ಲಿಂಗದ ಬಗ್ಗೆ ಸ್ಪಷ್ಟೀಕರಣ ಬೇಕಿದ್ದರೆ, ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಲಿ. ರಾಮ ಕೃಷ್ಣ ಪರಮ ಹಂಸರು, ಬಸವಣ್ಣ,ಸ್ವಾಮಿ ವಿವೇಕಾನಂದರು, ಸ್ವಾಮಿ ನಾರಾಯಣ ಗುರುಗಳು ಏನು ದೇವಾಸ್ತಿತ್ವದ ಬಗ್ಗೆ ಪ್ರತಿಪಾದಿಸಿದ್ದಾರೆ ಅದರಲ್ಲಿ ಅಲ್ಲಾಹನ ವರ್ಣ, ಲಿಂಗದ ಬಗ್ಗೆ ಸ್ಪಷ್ಟೀಕರಣವನ್ನು ಲಭ್ಯವಾಗಿಸಿ ಕೊಳ್ಳಲು ಅಸಾಮರ್ಥ್ಯ ಹೊಂದಿದ ಪುನೀತ್ ಗೆ ಇನ್ನಾದರೂ ಜ್ಞಾನೋದಯವಾಗಲಿ.

ಕೆ.ಅಶ್ರಫ್( ಮಾಜಿ ಮೇಯರ್)
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

About The Author

Leave a Reply