August 30, 2025
WhatsApp Image 2024-11-14 at 4.48.35 PM

ಮಲ್ಪೆ :  ಮಧ್ಯರಾತ್ರಿ ಮಲ್ಪೆ ಹನುಮಾನ್ ನಗರ ಪ್ರದೇಶದಲ್ಲಿ ಅರೆಬೆತ್ತಲೆಯಾಗಿ ಯುವಕನೊಬ್ಬ ಎಲ್ಲರ ಮನೆಯ ಬಾಗಿಲು ತಟ್ಟಿ ಓಡುತ್ತಿದ್ದ ಯುವಕನನ್ನು ಸ್ಥಳೀಯ ನಿವಾಸಿಗಳು ಮಲ್ಪೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಮಲ್ಪೆ ಪೊಲೀಸರ ಅವನ ಮೇಲೆ ತನಿಖೆಯನ್ನು ಕೂಡ ನಡೆಸದೆ ಬಿಟ್ಟು ಕಳಿಸಿದ್ದಾರೆ ಎನ್ನುವುದು ಸ್ಥಳೀಯರ ಸಂಶಯಕ್ಕೆ ಎಡೆ ಮಾಡಿದೆ. ಹಿಂದೆ ಹಲವಾರು ಬಾರಿ ಕೂಡ ಇಂಥ ಪ್ರಕರಣಗಳು ನಡೆದಿದ್ದು ಈಗ ಮತ್ತೆ ಪುನಃ ಘಟನೆ ಮರುಕಳಿಸಿದಾಗ ಎಚ್ಚೆತ್ತು ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸ ಠಾಣೆಗೆ ಒಪ್ಪಿಸಿದ್ದಾರೆ.

ಸ್ಥಳೀಯರನ್ನು ಎರಡು ಗಂಟೆಗಳ ಕಾಲ ಠಾಣೆಯಲ್ಲಿ ಕಾಯಿಸಿ ಇವರನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಬನ್ನಿ ಎನ್ನುವಂತ ಬೇಜವಾಬ್ದಾರಿ ಹೇಳಿಕೆಗಳನ್ನು ಪೊಲೀಸರು ನೀಡಿದ್ದು ಪೊಲೀಸರ ಮೇಲೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇತ್ತೀಚಿಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣದ ನಂತರ ಇಂಥ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ರಾತ್ರಿ ವೇಳೆಯಲ್ಲಿ ಠಾಣೆಯಲ್ಲಿ ಕುರಿಸಲು ಭಯಪಡುತ್ತಿದ್ದಾರೆ ಎನ್ನಲಾಗಿದೆ.

ಮಲ್ಪೆ ಪರಿಸರದಲ್ಲಿ ಮೀನುಗಾರಿಕಾ ಬೋಟ್ನಲ್ಲಿ ಕಾರ್ಯನಿರ್ವ ಹಿಸಲು ಆಗಮಿಸಿದಂತಹ ಬಾಂಗ್ಲಾದೇಶ ನಸುಳು ಕೊರರು ಹೊರ ರಾಜ್ಯಗಳ ಆಧಾರ್ ಕಾರ್ಡ್ ತಯಾರಿಸಿಕೊಂಡು ಇಂಥ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.

ಮಲ್ಪೆ ಪೊಲೀಸರ ಕಾರ್ಯ ವೈಖರಿ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು  ಸಾರ್ವಜನಿಕರು ಆಗ್ರಹಿಸಿದ್ದಾರೆ.

About The Author

Leave a Reply