ಕಾಸರಗೋಡು ಸ್ನೇಹಸ್ಪರ್ಶಂ ಟೈಲ್ಸ್ ವರ್ಕರ್ಸ್ ಅಸೋಸಿಯೇಶನ್ (ರಿ) ಕಾಸರಗೋಡು ಇದರ ವತಿಯಿಂದ ದಿನಾಂಕ: 15/11/2024 ರಂದು ಬೊವಿಕ್ಕಾನ ಮುಳಿಯಾರು ಪಂಚಯಾತ್ ನಲ್ಲಿ ಅಂಗವೈಫಲ್ಯ ಹೊಂದಿರುವ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಬೋವಿಕ್ಕಾನ ಬಡ್ಸ್ ಶಾಲೆಯ ಮಕ್ಕಳಿಗೆ ಒಂದು ದಿನ ಊಟವನ್ನು ನೀಡಲಾಯಿತು.ಈ ಸಂದರ್ಭದಲ್ಲಿ STWA ಇದರ ಅಧ್ಯಕ್ಷರಾದ ರಫೀಕ್ ಬೆದ್ರ , ಉಪಾಧ್ಯಕ್ಷರಾದ ಸುರೇಶ್ ಮೇಲ್ಪರಂಬು , ಕಾರ್ಯದರ್ಶಿ ಶಾಫಿ ಬೋವಿಕ್ಕಾನ, ಜೊತೆ ಸಿದ್ದೀಕ್ ಪವ್ವಲ್, ಕೋಶಾಧಿಕಾರಿ ಸಂಜಯ್ ಮುಳ್ಳೇರಿಯಾ , ರಕ್ಷಾಧಿಕಾರಿ ಸುರೇಶ್ ಅಟ್ಟಂಗಾನ ಹಾಗೂ ಸಮಿತಿ ಸದಸ್ಯರಾದ ಖಾದರ್ ಬೋವಿಕ್ಕಾನ , ಅಕ್ಬರ್ ಮಂಜ ತ್ತಡ್ಕ, ಅನಿಲ್ ಕಾನತ್ತೂರು, ಮಸೂದ್ ಸಂಟ್ಯಾರ್ , ಹಕೀಂ ನೆಲ್ಲಿಕಟ್ಟೆ ಮತ್ತು ಸುಜಿತ್ ಕುಂಬಳೆ ಉಪಸ್ಥಿತರಿದ್ದರು.