March 24, 2026
WhatsApp Image 2024-11-19 at 5.54.52 PM

ನಗರದಲ್ಲಿ ಪುಂಡರ ಅಟ್ಟಹಾಸ ಮುಂದುವರೆದಿದೆ. ಯುವಕನೊಬ್ಬನ ಮೇಲೆ ಪುಂಡರ ಗ್ಯಾಂಗ್ ಒಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

ಬೆಂಗಳೂರಿನ ಮಾರತಹಳ್ಳಿ ಬಳಿಯ ದೊಡ್ಡನಕುಂದಿ ರೈಲ್ವೆ ಹಳಿಯ ಬಳಿಯಲ್ಲಿ ಯುವಕನೊಬ್ಬನ ಮೇಲೆ ಗ್ಯಾಂಗ್ ಒಂದರ ಯುವಕರು ದೊಣ್ಣೆ ಮತ್ತು ಹೆಲ್ಮೆಟ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

 

ಹಲ್ಲೆಗೆ ಒಳಗಾದಂತ ಯುವಕ ರಸ್ತೆ ಪಕ್ಕದಲ್ಲಿ ಕೆಳಗೆ ಬಿದ್ದರೂ ಬಿಡದಂತ ಪುಂಡರ ಗ್ಯಾಂಗ್, ಮತ್ತಷ್ಟು ಹಲ್ಲೆ ಮಾಡಿದ್ದಾರೆ. ಈ ಹಲ್ಲೆ ಮಾಡುವಂತ ವೀಡಿಯೋವನ್ನು ಚಿತ್ರಿಸಿಕೊಂಡಿದ್ದು, ಈಗ ವೀಡಿಯೋ ವೈರಲ್ ಕೂಡ ಆಗಿದೆ.

About The Author

Leave a Reply